ಪಣೋಲಿಬೈಲು: ಕಲ್ಲುರ್ಟಿ ದೈವಸ್ಥಾನ ರೂ ೧ಕೋಟಿ ವೆಚ್ಚದಲ್ಲಿ ಅನ್ನಛತ್ರ ನಿರ್ಮಾಣಕ್ಕೆ ಭೂಮಿ ಪೂಜೆ
ಬಂಟ್ವಾಳ: ತಾಲ್ಲೂಕಿನ ಪಣೋಲಿಬೈಲು ಕಲ್ಲುರ್ಟಿ ಕ್ಷೇತ್ರ ಬಳಿ ರೂ ೧ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅನ್ನಛತ್ರಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಗುರುವಾರ ಭೂಮಿಪೂಜೆ ನೆರವೇರಿಸಿದರು.
ಜಿಲ್ಲೆಯಲ್ಲಿ ‘ಎ’ ಗ್ರೇಡ್ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ಭಕ್ತರಿಗೆ ಪ್ರತಿದಿನ ಅನ್ನಸಂತರ್ಪಣೆ ನಡೆಯುತ್ತಿದ್ದು, ಪಣೋಲಿಬೈಲು ಕ್ಷೇತ್ರದಲ್ಲಿ ಸ್ಥಳಾವಕಾಶ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಇದೀಗ ದೈವಸ್ಥಾನ ವತಿಯಿಂದ ಪಕ್ಕದಲ್ಲೇ ಜಮೀನು ಖರೀದಿಸಿ ರೂ ೧ಕೋಟಿ ವೆಚ್ಚದಲ್ಲಿ ಸುಸಜ್ಜಿತ ಅನ್ನಛತ್ರ ನಿರ್ಮಾಣಗೊಳ್ಳಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಪಣೋಲಿಬೈಲು ಕಲ್ಲುರ್ಟಿ ಕ್ಷೇತ್ರ ಬಳಿ ರೂ ೧ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅನ್ನಛತ್ರಕ್ಕೆ ಮೇ.19ರಂದು ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಜಿಪಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಸಜಿಪಗುತ್ತಿನ ಗಡಿಪ್ರಧಾನ ಕೋಚು ಯಾನೆ ಮುಂಡಪ್ಪ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ಕ್ಷೇತ್ರದ ಅರ್ಚಕರಾದ ವಾಸು ಮೂಲ್ಯ, ನಾರಾಯಣ ಮೂಲ್ಯ, ಮೋನಪ್ಪ ಮೂಲ್ಯ, ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ, ಸಜಿಪಮೂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹರಿಣಾಕ್ಷಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಪ್ರಮುಖರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಜಯರಾಮ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ, ದೇವಿಪ್ರಸಾದ್ ಪೂಂಜ, ಉದಯ ಕುಮಾರ್ ಕಾಂಜಿಲ, ಶಿವಪ್ರಸಾದ್ ಶೆಟ್ಟಿ, ಲೋಹಿತ್ ಪಣೋಲಿಬೈಲು, ಯಶವಂತ ನಾಯ್ಕ್ ನಗ್ರಿ, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಶೆಟ್ಟಿ ವಾಮದಪದವು, ರತ್ನಾಕರ ನಾಡಾರು, ರಮೇಶ್ ಕುಲಾಲ್ ಪಣೋಲಿಬೈಲು, ರಮೇಶ್ ಭಂಡಾರಮನೆ, ಗುತ್ತಿಗೆದಾರ ಆನಂದ ಸಪಲ್ಯ ಉಪ್ಪಿನಂಗಡಿ ಮತ್ತಿತರರು ಇದ್ದರು.