ರಾಘವೇಂದ್ರ ಪ್ರಭು ಕವಾ೯ಲುರವರಿಗೆ ಪುರಸ್ಕಾರ
ಉಡುಪಿ : ಯುವ ಸಾಮಾಜಿಕ ಕಾಯ೯ಕತ೯, ತರಬೇತುದಾರ ರಾಘವೇಂದ್ರ ಪ್ರಭು ಕವಾ೯ಲುರವರ ಸಮಾಜ ಮುಖಿ ಕಾಯ೯ಗಳಿಗೆ ಬೆಂಗಳೂರಿನ ಆತ್ಮಶ್ರೀ ಸಾಂಸ್ಕೃತಿಕ ಫೌಂಡೇಶನ್ ನ ವಿಶೇಷ ಕಾಯ೯ಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಸ್ಮಾರಕ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ವಿವಿಧ ಸಮಾಜ ಮುಖಿ ಕಾಯ೯ಗಳಿಗೆ ಈ ಗೌರವ ನೀಡಲಾಗುತ್ತದೆ. ಮೇ.15ರಂದು ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯುವ ಕಾಯ೯ಕ್ರಮದಲ್ಲಿ ಸಚಿವ ಸಿ.ಸಿ ಪಾಟೀಲ್ ರವರು ಭಾಗವಹಿಸಲಿರುವರು