ಕೈಕಂಬ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಪುಂಚಮೆ ಆಸರೆ ಸೇವಾ ಫೌಂಡೇಶನ್ ಮತ್ತು ಅಮೆಚೂರು ಕಬಡ್ಡಿ ಅಸೋಸಿಯೇಶನ್ ವತಿಯಿಂದ ಎ.23ರಂದು ಶನಿವಾರ ರಾತ್ರಿ ಏರ್ಪಡಿಸಿದ್ದ ಅಂತರ್ ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಪ್ರೋ. ಕಬಡ್ಡಿ ಪಂದ್ಯಾಟ ಕಾಯ್ರಕ್ರಮವನ್ನು ಪೊಳಲಿ ರಾಮಕೃಷ್ಣ ಆಶ್ರಮದ ಸ್ವಾಮಿ ವಿವೇಕ ಚೈತನ್ಯಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕರಿಯಂಗಳ ಗ್ರಾಮದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ,ಮಾ.ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ , ಮಾ. ತಾ. ಪಂ. ಸದಸ್ಯ ಯಶವಂತ ಪೂಜಾರಿ,ಉದ್ಯಮಿಗಳಾದ ಕೆ. ಜನಾರ್ಧನ ಶೆಟ್ಟಿ ಪುಂಚಮೆ, ಕನ್ಯಾಬೆಟ್ಟು , ಉಮೇಶ್ ಸಾಲಿಯಾನ್ ಬೆಂಜನಪದವು, ಟ್ರಸ್ಟಿನ ಅಧ್ಯಕ್ಷ, ಗ್ರಾ.ಪಂ.ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಉಮೇಶ್ ಆಚಾರ್ಯ , ರಾಜು ಕೋಟ್ಯಾನ್ ಗರೋಡಿ,ರೋಶನ್ ಪುಂಚಮೆ, ಪ್ರಸಾದ್ ಗರೋಡಿ, ಇಬ್ರಾಹಿಂ ನವಾಜ್ , ಪ್ರಧಾನ ಕಾರ್ಯದರ್ಶಿ ಬಶೀರ್ ಗಾಣೆಮಾರ್, ಗ್ರಾ.ಪಂ.ಉಪಾಧ್ಯಕ್ಷೆ ವೀಣಾ ಆಚಾರ್ಯ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ವೆಂಕಟೇಶ ನಾವಡ, ಸುಕೇಶ್ ಚೌಟ ಚರಣ್ ಕೋಟ್ಯಾನ್, ಚಿತ್ರನಟರಾದ ಭೋಜರಾಜ್ ವಾಮಂಜೂರು, ಅರ್ಜುನ್ ಕಾಪಿಕಾಡ್, ಸಪ್ತ ಪಾವೂರು, ಕೊರಗಜ್ಜ ಕಟ್ಟೆ ಬೆಂಜನಪದವು , ವಿಜಯ ಬೆಂಜನಪದವು, ಮತ್ತಿತರರು ಇದ್ದರು.


