ಬಂಟ್ವಾಳ: ತಾಲ್ಲೂಕಿನ ಅರಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮೇ.04ರಂದು ಬುಧವಾರ ಆರಂಭಗೊಂಡ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಧ್ವಜಾರೋಹಣ ನಡೆಯಿತು. ಡಿ.ಸುರೇಂದ್ರ ಕುಮಾರ್, ಎ.ರಾಜೇಶಂದ್ರ ಶೆಟ್ಟಿ ಮತ್ತಿತರರು ಇದ್ದರು.6btl-Basadi

ಬಂಟ್ವಾಳ ತಾಲ್ಲೂಕಿನಲ್ಲಿ ಸುಮಾರು ೩೫೦ಕ್ಕೂ ಮಿಕ್ಕಿ ವರ್ಷಗಳ ಹಿನ್ನೆಲೆ ಹೊಂದಿರುವ ಅರಳ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಜೀರ್ಣೋದ್ಧಾರಗೊಂಡು ‘ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ’ ಪ್ರಯುಕ್ತ ಮೇ.04ರಂದು ಬುಧವಾರ ಧ್ವಜಾರೋಹಣ ನೆರವೇರಿಸುವ ಮೂಲಕ ಐದು ದಿನಗಳ ವಿವಿಧ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಇದೇ ವೇಳೆ ತೋರಣ ಮುಹೂರ್ತ, ಕ್ಷೇತ್ರಪಾಲ ಪ್ರತಿಷ್ಠೆ ನಡೆಯಿತು. ಗುರುವಾರ ಬೆಳಿಗ್ಗೆ ನಾಗಪ್ರತಿಷ್ಠೆ, ಯಕ್ಷಪ್ರತಿಷ್ಠೆ, ಸಂಜೆ ಪದ್ಮಾವತಿ ದೇವಿ ಪ್ರತಿಷ್ಠೆ ಸಹಿತ ಯಾಗ ಮಂಟಪದಲ್ಲಿ ಕ್ರಿಯಾಯುಕ್ತ ಗರ್ಭಾವತರಣ ಕಲ್ಯಾಣ ನೆರವೇರಿಸಲಾಯಿತು. ಶುಕ್ರವಾರ ಬೆಳಿಗ್ಗೆ ಜಿನಬಾಲಕನ ಜನ್ಮ ಕಲ್ಯಾಣ, ಜನ್ಮಾಭಿಷೇಕ, ಬಾಲಲೀಲಾ ಮಹೋತ್ಸವ ಬಲಿ ವಿಧಾನ ಮತ್ತಿತರ ಕಾರ್ಯಕ್ರಮ ನಡೆಯಿತು.

ಧರ್ಮಸ್ಥಳ ಕ್ಷೇತ್ರದ ಡಿ.ಹೇಮಾವತಿ ಹೆಗ್ಗಡೆ, ಡಿ.ಅನಿತಾ ಸುರೇಂದ್ರ ಕುಮಾರ್, ಎ.ರಾಜೇಶಂದ್ರ ಶೆಟ್ಟಿ ದಂಪತಿ, ಪದ್ಮಲತಾ ಡಾ.ನಿರಂಜನ್ ಕುಮಾರ್, ಅರ್ಕುಳಬೀಡು ವಜ್ರನಾಭ ಶೆಟ್ಟಿ, ಸುದರ್ಶನ್ ಜೈನ್ ಪಂಜಿಕಲ್ಲು, ಹೊಸಂಗಡಿ ಅರಮನೆ ಮತ್ತು ಅರಳ ಈರೇಂದಿಲು ಮನೆತನದವರು ಇದ್ದರು.

ಡಾ.ಹೆಗ್ಗಡೆ ಭೇಟಿ:
ಇಲ್ಲಿನ ಅರಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಶನಿವಾರ ಸಂಜೆ ೪.೩೦ ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಧರ್ಮಸ್ಥಳ ಧಮಾಧಿಕಾರಿ ಡಾ.ಡಿ.ವೀರೇಂದ್ರೆ ಹೆಗ್ಗಡೆ ಭಾಗವಹಿಸಲಿದ್ದು, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಬಸದಿ ಮುಖ್ಯಸ್ಥ ಎ.ರಾಜೇಂದ್ರ ಶೆಟ್ಟಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *