ಮುಂಬಯಿ : ಶ್ರೀವಲ್ಲಿ ರೈ ಮಾರ್ಟೆಲ್ ನೇತೃತ್ವದ ತುಳುಕೂಟ ತನ್ನ ಮೊದಲ ವರ್ಷದ ಸಂಭ್ರಮದಲ್ಲಿ ಐಲೇಸಾ ಸಂಯೋಜಿಸಿದ ಮುಂಬಯಿ ಸಾಹಿತ್ಯ ಲೋಕದ ಹಿರಿಯಕ್ಕ ಎಂದೇ ಪ್ರಸಿದ್ಧರಾದ ಡಾ| ಸುನೀತಾ ಎಂ.ಶೆಟ್ಟಿ ಅವರ ‘ಕಬಿತೆ ಪುಟ್ಟು೦ಡೊ’ ಎಂಬ ಶೈಲಿಯ ತುಳು ಹಾಡನ್ನು ಕಡಲಾಚೆಯ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಮುಖಾಂತರ ಇದೇ ಮೇ.೦೭ ಶನಿವಾರ ಫ್ಲೋರಿಡಾ (ಸಂಜೆ ೦೭.೦೦ ಭಾರತೀಯ ಸಮಯ) ಬೆಳಿಗ್ಗೆ ೦೯.೩೦ ಫ್ಲೋರಿಡಾ, ಅಮೇರಿಕಾ ಕಾಲಮಾನದಲ್ಲಿ ಬಿಡುಗಡೆ ಗೊಳಿಸಲಿದೆ. ಈ ಹಾಡನ್ನು ಖ್ಯಾತ ಕಲಾವಿದೆ ಕಲಾವತಿ ದಯಾನಂದ್ ಹಾಡಿದ್ದು, ಪ್ರಮೋದ್ ಸಪ್ರೆ ಸಂಗೀತ ನೀಡಿದ್ದಾರೆ .
ಇದೇ ಸಂದರ್ಭ ದಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಬಿಡುಗಡೆಗೊಂಡು ತುಳು ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿಗೆ ಪಾತ್ರವಾದ ಬೆಂಗಳೂರುನ ಶಾಂತಾರಾಮ್ ಶೆಟ್ಟಿ ಅವರ ‘ಮಣ್ಣ ಬಾಜನದ ಉಂದು ಮಣ್ಣುದಾ ಬಾಜನ’ ಹಾಡನ್ನು ಆಲ್ ಅಮೇರಿಕಾ ತುಳು ಅಸೋಸಿಯೇಷನ್ (ಎಎಟಿಎ) ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಲೋಕಾರ್ಪಣೆ ಮಾಡಲಿದ್ದಾರೆ. ಐಲೇಸಾದ ಗಾಯಕ ಕೆ.ಸುಧಾಕರ್ ಶೆಟ್ಟಿ ಇವರ ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆಯಿರುವ ಈ ಹಾಡಿಗೆ ನಿಶಾಂತ್ ಕಲ್ಲಿಕೋಟೆ ಸಂಗೀತ ನೀಡಿದ್ದಾರೆ.
ಡಾ| ಸುನೀತಾ ಎಂ.ಶೆಟ್ಟಿ ಅವರ ಹಾಡಿಗೆ ರೇಣುಕಾ ಸ್ವಾಮೀ ಹೊನ್ನೆಬಾಗಿ ಅವರ ಸ್ಯಾಂಡ್ ಆರ್ಟ್ ಮೂಲಕ ವಿಡಿಯೋ ಮೂಡಿ ಬಂದಿದೆ. ಶಾಂತಾರಾಮ ಶೆಟ್ಟಿ ಅವರ ಉಂದು ಮಣ್ಣುದಾ ಬಾಜನವು ಸೂರಿ ಮಾರ್ನಾಡ್ ಅವರ ನಟನೆಯ ಮೂಲಕ ಮ್ಯೂಸಿಕ್ ವಿಡಿಯೋ ರೂಪದಲ್ಲಿ ಮೂಡಿ ಬಂದಿದೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅವರು ಬಿಸು ಪರ್ಬದ ಬಗ್ಗೆ ಮಾಹಿತಿ ನೀಡಲಿದ್ದು, ಅತಿಥಿ ಅಭ್ಯಾಗತ ಡಾ| ಗುರು ಪ್ರಸಾದ್ ಅವರು ತುಳು ಕೀಲಿಮಣೆ ಉಪಯೋಗದ ಬಗ್ಗೆ ತಿಳಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕ ಡಾ| ರಮೇಶ್ಚಂದ್ರ, ನೃತ್ಯ ವಿದ್ವಾನ್ ಡಾ| ರಾಧಿಕಾ ಕಲ್ಲೂರಾಯ ಅವರ ಸುಂದರ ಹಾಡುಗಳ ನೃತ್ಯ ಕಾರ್ಯಕ್ರಮವಿದೆ. ಹೇಮಕುಮಾರಿ ಎಂ., ಧನ್ಯ ರಾವ್ ಫ್ಲೋರಿಡಾ, ಜಿತೇಶ್ ಸುವರ್ಣ ಫ್ಲೋರಿಡಾ, ನಿಯತಿ ಯು.ಶೆಟ್ಟಿ, ರವಿರಾಜ್ ಶೆಟ್ಟಿ, ಸುವಿಧ್ ಮಾರ್ನಾಡ್, ಅಂಶಿಕಾ ಮತ್ತು ಐನಿ ಇವರೆಲ್ಲಾ ಗಾಯನ ಮತ್ತು ಅಭಿನಯದ ಮೂಲಕ ಮನರಂಜಿಸಲಿದ್ದಾರೆ .
ಫ್ಲೋರಿಡಾ ತುಳುಕೂಟದ ಯೂ ಚಾನೆಲ್‌ನಲ್ಲಿ ಕಾರ್ಯಕಮ ಪ್ರಸಾರವಾಗಲಿದ್ದು ಫ್ಲೋರಿಡಾದಲ್ಲಿನ ಅನುಜ್ಞಾ ರಾವ್, ರಜನಿ ಶರಣ್, ರಾಧಿಕಾ ಅರ್ಪಣ್, ಅರ್ಪಣ್ ನಾಯಕ್ ಇವರು ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ ಎಂದು ಫ್ಲೋರಿಡಾ ತುಳುಕೂಟದ ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್ ಹಾಗೂ ಐ-ಲೇಸಾ ಮುಂಬಯಿ ಸಂಯೋಜಕ ಸೂರಿ ಮಾರ್ನಾಡ್ ತಿಳಿಸಿದ್ದಾರೆ.
