ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ೪೧ ನೇ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜದ ೩೧ನೇ ವಾರ್ಷಿಕೋತ್ಸವವು ಎ.೩೦ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಿತು.0205pkt1

ಉಡುಪಿ ಜಿಲ್ಲಾ ೨ ನೇ ಹೆಚ್ಚುವರಿ ನ್ಯಾಯಾಽಶ ದಿನೇಶ್ ಹೆಗ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘ, ಸಂಸ್ಥೆಗಳ ಸಮಾಜಮುಖಿ ಕಾರ್ಯ ಅಭಿನಂದನೀಯ. ಇದರಿಂದ  ಸದಸ್ಯರ ಹಾಗೂ ಸಮಾಜದ ಏಳಿಗೆ ಸಾಧ್ಯಎಂದು ಹೇಳಿದರು. ಪ್ರತಿಭೆಗಳನ್ನು, ಸಾಧಕರನ್ನು ಗುರುತಿಸಿ ಗೌರವಿಸುವುದು ಉತ್ತಮ ಕಾರ್ಯ ಎಂದರು.

ಪ್ರಗತಿಪರ ಕೃಷಿಕ ಉದಯ ಕುಮಾರ್ ಜೈನ್ ಕಟ್ಟೆಮನೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರಂತರ ಚಟುವಟಿಕೆಗಳಿಂದ ಕ್ರಿಯಾಶೀಲರಾಗಿರುವ ಮಿತ್ರ ಮಂಡಳಿಯ ಕಾರ್ಯಗಳು ಮಾದರಿಯಾಗಿದ್ದು,  ಹೆಮ್ಮೆಯಾಗಿದೆ ಎಂದರು.

ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಉದ್ಯಮಿ ಹರೀಂದ್ರ ಪೈ ನಯನಾಡು, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಅಧ್ಯಕ್ಷ ಕೆ. ಲಕ್ಷ್ಮೀ ನಾರಾಯಣ ಉಡುಪ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ,  ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷೆ ಶಶಿಪ್ರಭಾ, ಪಿಲಾತಬೆಟ್ಟು ಗ್ರಾ.ಪಂ.ಸದಸ್ಯರಾದ ನೆಲ್ವಿಸ್ಟರ್ ಪಿಂಟೊ, ಪುಷ್ಪಲತಾ ಮೋಹನ್, ಸಂಘದ ಗೌರವಾಧ್ಯಕ್ಷ ಮೋಹನ್ ಹೆಗ್ಡೆಬೆಟ್ಟು, ವನಿತಾ ಸಂಘದ ಅಧ್ಯಕ್ಷೆ ಆಶಾ ದಿನಕರ್, ಗೌರವಾಧ್ಯಕ್ಷೆ ಅಮೃತಾ ಎಸ್. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧಕರಾದ ದಿನೇಶ್ ಹೆಗ್ಡೆ(ಕಾನೂನು)ಜಯಪ್ರಕಾಶ್ ಭಟ್(ಬೆಳ್ಳಿಪದಕ ಪುರಸ್ಕೃತ ಚಾಲಕರು), ಜಗದೀಶ್ ಅತ್ತಾಜೆ(ಪೊಲೀಸ್ ಇಲಾಖೆ), ಸಚಿನ್ ಅತ್ತಾಜೆ(ಕಲೆ)ಅವರನ್ನು ಸಮ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಹರೀಶ್ಚಂದ್ರ ಶೆಟ್ಟಿಗಾರ್ ವಂದಿಸಿದರು. ವಿಜಯಾ ವರದಿ ವಾಚಿಸಿದರು. ಪ್ರಜ್ವಲ್ ಸಿದ್ದಕಟ್ಟೆ ನಿರೂಪಿಸಿದರು. ಮಧ್ಯಾಹ್ನ  ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಯಕ್ಷಗಾನ ಮಂಡಳಿಯ ೨೫ ನೇ ವರ್ಷದ ಪ್ರಯುಕ್ತ   ತಾಳಮದ್ದಳೆ ನಡೆಯಿತು.  ರಾತ್ರಿ ಸದಸ್ಯರಿಂದ ವಿವಿಧ ಮನೋರಂಜನ ಕಾರ್ಯಕ್ರಮ, ತುಳುನಾಟಕ ಪ್ರದರ್ಶನ ನಡೆಯಿತು.

By Suddi9

Leave a Reply

Your email address will not be published. Required fields are marked *