ಬಂಟ್ವಾಳ:  ತಾಲ್ಲೂಕಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ಮಹಾವಿಷ್ಣು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಎರಡನೇ ಧಾರ್ಮಿಕ ಸಭೆ ಕಾರ್ಯಕ್ರಮ ಮೂಡುಬಿದ್ರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿ ಉದ್ಘಾಟಿಸಿದರು.2btl-iliyur
ಕೆಲವೊಂದು ಚಿಕ್ಕ ವಿಚಾರಗಳನ್ನು ಕೈಬಿಟ್ಟು ಧರ್ಮ ಉಳಿಸುವ ಮಹತ್ಕಾರ್ಯಕ್ಕೆ ಮುಂದಾಗಬೇಕು. ಈ ಜಿಲ್ಲೆಯಲ್ಲಿ ವೈದಿಕ, ಶ್ರವಣ ಮತ್ತು ಆದಿ ದ್ರಾವಿಡ ಈ ಮೂರು ಭಾರತೀಯ ಸಂಸ್ಕೃತಿ ಅವಿಭಜಿತ ಜಿಲ್ಲೆಯಲ್ಲಿ ಸಮ್ಮಿಲಿತಗೊಂಡಿದೆ ಎಂದು ಮೂಡುಬಿದ್ರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿ ಹೇಳಿದ್ದಾರೆ.

ಇಲ್ಲಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ಮಹಾವಿಷ್ಣು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಎರಡನೇ ಧಾರ್ಮಿಕ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮಹೇಶ್ ಕುಮಾರ್ ಭಟ್ ಕರಿಕ್ಕಳ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಐತಾಳ್ ಲಡ್ಡುಕೋಡಿ, ಸ್ಥಳದಾನಿ ಯಮುನಾ ಅಗರಗಂಡಿ, ವೀಣಾ ಪಿ.ಆಳ್ವ ಬೆಂಗಳೂರು, ಶಿಲ್ಪಿ ರಾಜೇಶ್ ಆಚಾರ್ಯ ಕಾಸರಗೋಡು, ಕುಮಾರ್ ಆಚಾರ್ಯ, ಜಯಪ್ರಕಾಶ್ ಆಚಾರ್ಯ, ಶ್ರಮದಾನಿ ವಿಶ್ವನಾಥ ಶೆಟ್ಟಿ ಸುಕ್ರೋಡಿ, ಸಂಜೀವ ಪೂಜಾರಿ ತಿಂಗಳಾಡಿ, ಜಯ ನಾಯ್ಕ ಅಂತರ, ಆನಂದ ಮೇಸ್ತಿç ಅಲ್ಲಂಗಾರು, ಶೇಖರ ನಾಯ್ಕ್ ಹಂಡೀರು, ಶಿವಾನಂದ ಕುಲಾಲ್ ನೇಲ್ಯಪಲ್ಕೆ, ಚೆನ್ನಮ್ಮ ಟೀಚರ್, ಪೂವಪ್ಪ ಪೂಜಾರಿ ಅಗಚರಕೋಡಿ, ಪ್ರಶಾಂತ್ ಪೂಜಾರಿ ನೇಲ್ಯಪಲ್ಕೆ, ಈಶ್ವರ ನಾಯ್ಕ್, ವಸಂತ ಪೂಜಾರಿ ಹಟದಡ್ಕ ಇವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ., ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಬಂಟ್ವಾಳ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಿರಿಯ ಎಂಜಿನಿಯರ್ ಕೃಷ್ಣ, ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಶಿವಪ್ರಸನ್ನ, ಮಂಗಳೂರು ಯೆನಪೋಯ ಆಸ್ಪತ್ರೆ ವೈದ್ಯ ಡಾ. ಗಗನ್ ದೀಪ್ ಬೆಂಗಳೂರು, ಉದ್ಯಮಿ ವಸಂತ ಶೆಟ್ಟಿ ಕೇದಗೆ, ರಾಜೇಂದ್ರ ಕುಮಾರ್ ಕಕ್ಯಪದವು, ಕಕ್ಯಪದವು ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ವಕೀಲ ಗುರುಪ್ರಸಾದ್ ಶೆಟ್ಟಿ, ಕೆ.ಮಹಾಬಲ ಶೆಟ್ಟಿ, ಉಪ್ಪಿನಂಗಡಿ ಸಿಎ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಪುಷ್ಪರಾಜ್ ಶೆಟ್ಟಿ, ಗೋವಾ ಉದ್ಯಮಿ ಯಶವಂತ ಕೆಂಚನಬೆಟ್ಟು, ಪ್ರಗತಿಪರ ಕೃಷಿಕ ಕುಸುಮಾಕರ ಶೆಟ್ಟಿ ಕುರಿಯಾಳಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷೆ ಲಾವಣ್ಯ ಬಲ್ಲಾಳ್, ಜೀರ್ಣೋದ್ಧಾರ ಸಮಿತಿ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಪೂಜಾರಿ ಹಟದಡ್ಕ ಇದ್ದರು.

ಸ್ವಾಗತ ಸಮಿತಿ ಸಂಚಾಲಕ ರಾಧಾಕೃಷ್ಣ ರೈ ಕೊಟ್ಟುಂಜ ಸ್ವಾಗತಿಸಿ, ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು. ಹರಿಪ್ರಸಾದ್ ಡೆಚ್ಚಾರ್ ಮತ್ತು ಪ್ರದೀಪ್ ಕಟ್ಟದಡೆ ಸಹಕರಿಸಿದರು.

By Suddi9

Leave a Reply

Your email address will not be published. Required fields are marked *