ಬಂಟ್ವಾಳ: ಇಲ್ಲಿನ ಮಂಚಿ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಇದೇ ೧ರಿಂದ ೩ರತನಕ ಸಂಜೆ ೬ಗಂಟೆಗೆ ‘ಮಂಚಿ ನಾಟಕೋತ್ಸವ’ ಕಾರ್ಯಕ್ರಮವು ಕುಕ್ಕಾಜೆ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದಲ್ಲಿ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಕಾಮತ್ ಮತ್ತಿತರ ಗಣ್ಯರು ಭಾಗವಹಿಸುವರು.
೧ರಂದು ಸಂಜೆ ಆಯನ ನಾಟಕ ಮನೆ ತಂಡದಿ ಮಂದ ‘ದ್ವೀಪ’, ೨ರಂದು ಸಂಜೆ ರಸಿಕರತ್ನ ಜೋಷಿ ಪ್ರತಿಷ್ಠಾನ ಪರ್ಕಳ ಇವರಿಂದ ‘ನನ್ನೊಳಗಿನ ಅವಳು’, ೩ರಂದು ಸಂಜೆ ಮಂಗಳೂರು ಅಸ್ತಿತ್ವ ತಂಡದಿಂದ ‘ಕೆಂಡೋನಿಯನ್ಸ್’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಟ್ರಸ್ಟಿನ ಅಧ್ಯಕ್ಷ , ವಕೀಲ ಕಜೆ ರಾಮಚಂದ್ರ ಭಟ್ ತಿಳಿಸಿದ್ದಾರೆ.
