ಬೆಂಗಳೂರು: ನಾಲ್ಕನೇ ಅಲೆಯ ಭಯ ಮತ್ತು ಹಾರಲು ಅಂತರರಾಷ್ಟ್ರೀಯ ಸ್ಥಳಗಳ ಕೊರತೆಯ ನಡುವೆಯು ಬೆಂಗಳೂರಿಗರಲ್ಲಿ ಈ ಬೇಸಿಗೆ ಪ್ರವಾಸಗಳ ಬೇಡಿಕೆಯನ್ನು ಹೆಚ್ಚಿಸುತ್ತಿದೆ ಎಂದು ಕ್ಯಾಬ್ ಸೇವೆಯ ಅಗ್ರಗಣ್ಯರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಬೇಸಿಗೆಯಲ್ಲಿ ಪ್ರವಾಸಿ ತಾಣ

ಕಳೆದ ಎರಡು ವರ್ಷಗಳಿಂದ ನಮ್ಮನ್ನು ಕಾಡಿದ್ದ ಕೋವಿಡ್ ಗ್ರಹಣ ಬಿಟ್ಟ ನಂತರ ಇತೀಚೆಗೆ ರಜೆಯ ಮಜವನ್ನು ಆಸ್ವಾದಿಸಲು ಅಥವಾ ವಿರಾಮಕ್ಕಾಗಿ ಹೊರ ರಾಜ್ಯಗಳ ರಸ್ತೆ ಪ್ರವಾಸಗಳ ಬೇಡಿಕೆಯು ಗಮನಾರ್ಹವಾಗಿ ಚೇತರಿಸಿಕೊಂಡಿದೆ ಎಂದು ಸವಾರಿ ಕಾರು ಬಾಡಿಗೆಯಂತಹ ಬೆಂಗಳೂರಿನ ಟ್ಯಾಕ್ಸಿ ಸೇವಾ ಪೂರೈಕೆದಾರರು ಹೇಳುತ್ತಾರೆ. ಲಾಕ್‌ಡೌನ್‌ಗಳು 2020 ಮತ್ತು 2021 ರಲ್ಲಿ ಮಧ್ಯ ವರ್ಷದ ಪ್ರಯಾಣಗಳನ್ನು ಸ್ಥಗಿತಗೊಳಿಸಿದ್ದವು. ಆದರೆ ಈಗ ಎಲ್ಲಾವು ಗ್ರಹಣ ಬಿಟ್ಟ ಹಾಗೆ ಮತ್ತೇ ಚಿಗುರಿಕೊಂಡಿವೆ ಎಂದು ಈ ವರ್ಷಕ್ಕೆ ಹೋಲಿಸಿ ಹೇಳುತ್ತಾರೆ.

ಚಿಗುರಿದ ಪ್ರವಾಸ ಉದ್ಯಮ

ಸುಮಾರು ತಿಂಗಳುಗಳಿಂದ ಕಾರು ಬಾಡಿಗೆ ಕ್ಯಾಬ್ ಬುಕಿಂಗ್ ಹೆಚ್ಚಾಗಿದ್ದು, ಬೆಂಗಳೂರಿನ ಯುವಜನತೆ ಸಾಮಾನ್ಯವಾಗಿ ತಂಪಾದ ವಾತಾವರಣ ಇರುವ ತಾಣಗಳಿಗೆ ಪ್ರಯಾಣಿಸುತ್ತಿದ್ದಾರೆ ಹೆಚ್ಚಾಗಿ, ನಂದಿ ಬೆಟ್ಟ, ಕರ್ನಾಟಕದ ಚಿಕ್ಕಮಗಳೂರು ಮತ್ತು ಕೊಡಗು, ತಮಿಳುನಾಡಿನ ಊಟಿ ಮತ್ತು ಕೊಡೈಕೆನಾಲ್ ಮತ್ತು ಕೇರಳದ ವಯನಾಡ್ ಮತ್ತು ಮುನ್ನಾರ್. ಗೋವಾ ಮತ್ತು ಪುದುಚೇರಿಯಂತಹ ಬೀಚ್ ವಿಹಾರಗಳು ಜನಪ್ರಿಯವಾಗಿವೆ. ವಯಸ್ಸಾದ ಸದಸ್ಯರಿರುವ ಕುಟುಂಬಗಳು ಹೆಚ್ಚಾಗಿ ಧರ್ಮಸ್ಥಳ, ಉಡುಪಿ, ಮುರ್ಡೇಶ್ವರ, ಮಂತ್ರಾಲಯ ತಿರುಪತಿ ಯಂತಹ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.

ತನ್ನದೇ ಆದ ವಿಶಿಷ್ಟ ಆನ್‌ಲೈನ್ ಕ್ಯಾಬ್ ಬುಕಿಂಗ್ ವ್ಯವಸ್ಥೆ ಹೊಂದಿರುವ ಸವಾರಿ ಕಾರ್ ರೆಂಟಲ್ಸ್‌ಗೆ ಬೆಂಗಳೂರು ನಗರ ಅತಿ ಹೆಚ್ಚು ಆದಾಯವನ್ನು ತಂದು ಕೊಡುತ್ತಿದೆ. “ಬೆಂಗಳೂರು ನಗರವೇ ತನ್ನ ವ್ಯಾಪಾರದ ನಾಲ್ಕನೇ ಒಂದು ಭಾಗವನ್ನು ತಂದು ಕೊಡುತ್ತಿದೆ”. “ದಸರಾ-ದೀಪಾವಳಿ ಸೀಸನ್‌ನಿಂದ ಈ ವರ್ಷದ ಜನವರಿ ಮಧ್ಯದವರೆಗೆ, ನಾವು ಸಾಂಕ್ರಾಮಿಕ-ಪೂರ್ವ ಪ್ರಯಾಣ ಸಂಖ್ಯೆಗಳಲ್ಲಿ ಶೇ 80%-85% ಅನ್ನು ತಲುಪಿದ್ದೇವೆ. ಇವುಗಳಲ್ಲಿ ಬೆಂಗಳೂರು ಅತಿ ಹೆಚ್ಚು ಗಮನಾರ್ಹವಾಗಿ ಚೇತರಿಸಿಕೊಂಡಿದೆ,” ಎಂದು ಸವಾರಿಯ VP and head of growth, ಆನಂದ್ ದೊರೈರಾಜ್ ಹೇಳುತ್ತಾರೆ, ಹೀಗೆ ಮುಂದುವರೆಸಿ, ನಗರದ ಪ್ರಯಾಣದ ತುಡಿತದ ಬಗ್ಗೆ ಮಾತನಾಡುತ್ತಾ, ಇದು ಕಡಿಮೆ ಕುಟುಂಬ ಬದ್ಧತೆಗಳೊಂದಿಗೆ ಯುವ, ಜನಸಂಖ್ಯೆಯಿಂದ ಮುನ್ನಡೆಸಲ್ಪಟ್ಟಿದೆ ಎಂದು ಅವರು ಹೇಳುತ್ತಾರೆ.

By suddi9

Leave a Reply

Your email address will not be published. Required fields are marked *