ಪೊಳಲಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಂಚಿಗೂಡು ನಿವಾಸಿ ಅಶ್ವತ್ತಮ್ಮ ಎಂಬ 80 ವರ್ಷದ ಮಹಿಳೆಯೊಬ್ಬರು ಭವತೀ ಭಿಕ್ಷಾಂದೇಹಿ ಎಂಬ ಧ್ಯೇಯವನ್ನು ಇಟ್ಟುಕೊಂಡು ಪೊಳಲಿ ದೇವಸ್ಥಾನದ ವಠಾರದಲ್ಲಿ ಭಿಕ್ಷಾಟನೆ ಮಾಡಿ ಪೊಳಲಿ ದೇವಳದ ಅನ್ನದಾನಕ್ಕೆ 1ಲಕ್ಷ ರೂಪಾಯಿಯನ್ನು ಎ.22ರಂದು ಶುಕ್ರವಾರ ನೀಡಿದರು.
ವರ್ಷದ ಬಹುತೇಕ ಸಮಯ ಮಾಲಾಧಾರಿಯಾಗಿದ್ದುಕೊಂಡೆ ಅಯ್ಯಪ್ಪ ಸೇವೆ ಮಾಡುತ್ತಿರುವ ಇವರ ಕುಟುಂಬದಲ್ಲಿ ಬಡತನವಿದ್ದರೂ ಇವರಲ್ಲಿ ಧಾರ್ಮಿಕ ಪ್ರಜ್ಞೆ, ಹೃದಯಶ್ರೀಮಂತಿಕೆಗೆ ಬರವಿಲ್ಲ.
ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಜಾತ್ರಾ ಸಂದರ್ಭ ಸೇರಿದಂತೆ ಇತರ ಕ್ಷೇತ್ರದಲ್ಲಿ ಬಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ಕೂಡಿಟ್ಟು ಶುಕ್ರವಾರ ಪೊಳಲಿ ದೇವಸ್ಥಾನದ ಅನ್ನದಾನ ನಿಧಿಗೆ ಸಮರ್ಪಿಸಿದ್ದಾರೆ.
ಪೊಳಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ, ದೇವಳದ ಪ್ರಧಾನ ಅರ್ಚಕರಾದ ಮಾಧವ ಭಟ್ ದೇವರಲ್ಲಿ ಪ್ರಾರ್ಥಿಸಿದರು. ನಾಗೇಶ್ ರಾವ್ , ಪೊಳಲಿ ವೆಂಕಟೇಶ್ ನಾವಡ, ನಾಗೇಶ್ ಪೊಳಲಿ, ನವೀನ್ ಪೊಳಲಿ. ಮತ್ತಿತರರು ಇದ್ದರು.


