ಬಂಟ್ವಾಳ: ತಾಲ್ಲೂಕಿನ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಸೋಮವಾರ ಸಮಾರೋಪಗೊಂಡ ೧೧ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳ ಕೂಟದಲ್ಲಿ ಕೋಣಗಳ ಓಟದ ದೃಶ್ಯ ಆಕರ್ಷಕವಾಗಿತ್ತು.18btl-Kambala

ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಎ.17ರಂದು ಭಾನುವಾರ ಆರಂಭಗೊಂಡುಂಡ ಪ್ರಸಕ್ತ ಋತುವಿನ ಕಡೇ ಕಂಬಳ ೧೧ ನೇ ವರ್ಷದ ‘ಮೂಡೂರು-ಪಡೂರು’ ಜೋಡುಕರೆ ‘ಬಂಟ್ವಾಳ ಕಂಬಳ’ ಸೋಮವಾರ ಸಮಾಪನಗೊಂಡಿತು. ಒಟ್ಟು ೧೬೨ ಜೊತೆ ಕೋಣಗಳು ಭಾಗವಹಿಸಿದ್ದವು.

ಫಲಿತಾಂಶ:
ಕನೆಹಲಗೆ ವಿಭಾಗದಲ್ಲಿ (ನೀರು ನೋಡಿ ಬಹುಮಾನ) ಪ್ರಥಮ: ಬೆಳ್ಳಿಪ್ಪಾಡಿ ರಮಾನಾಥ ರೈ (ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ) ದ್ವಿತೀಯ: ಬಾರ್ಕೂರು ಶಾಂತಾರಾಮ ಶೆಟ್ಟಿ (ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್) ಅಡ್ಡ ಹಲಗೆ ವಿಭಾಗ : ಪ್ರಥಮ: ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ “ಎ” (ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ) ದ್ವಿತೀಯ: ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ “ಬಿ” (ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ) ಹಗ್ಗ ಹಿರಿಯ ವಿಭಾಗ : ಪ್ರಥಮ: ಮಿಜಾರ್ ಪ್ರಸಾದ್ ನಿಲಯ ಪ್ರಖ್ಯಾತ್ ಶೆಟ್ಟಿ “ಎ” (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ) ದ್ವಿತೀಯ: ಮಿಜಾರ್ ಪ್ರಸಾದ್ ನಿಲಯ ಪ್ರಖ್ಯಾತ್ ಶೆಟ್ಟಿ “ಬಿ” (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ) ಹಗ್ಗ ಕಿರಿಯ ವಿಭಾಗ : ಪ್ರಥಮ: ನಂದಳಿಕೆ ಕಂಪೊಟ್ಟು ವಿಕ್ಟರ್ ನೊರೊನ್ಹ (ಓಡಿಸಿದವರು: ಭಟ್ಕಳ ಶಂಕರ್) ದ್ವಿತೀಯ: ಶ್ರೀ ವಿಷ್ಣುಮೂರ್ತಿ ದೇವತಾ ಬಿಳಿಯೂರು ಮೇಗಿನಮನೆ ಶ್ರೀಶಾಂತ್ ಗಣಪ ಭಂಡಾರಿ (ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್) ನೇಗಿಲು ಹಿರಿಯ ವಿಭಾಗ : ಪ್ರಥಮ: ಬೀಯಪಾದೆ ಕೆರೆಕೋಡಿಗುತ್ತು ಶೇಖರ ಪೂಜಾರಿ “ಎ” (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ) ದ್ವಿತೀಯ: ಬೋಳದ ಗುತ್ತು ಸತೀಶ್ ಶೆಟ್ಟಿ “ಬಿ” (ಓಡಿಸಿದವರು: ಮರೋಡಿ ಶ್ರೀಧರ್) ನೇಗಿಲು ಕಿರಿಯ ವಿಭಾಗ : ಪ್ರಥಮ: ಕಟೀಲ್ ಕೊಡೆತ್ತೂರು ಕಿನ್ನೆಚ್ಚಿಲ್ ಪ್ರಸಾದ್ ಶೆಟ್ಟಿ “ಎ” (ಓಡಿಸಿದವರು: ಪಟ್ಟೆ ಗುರುಚರಣ್) ದ್ವಿತೀಯ: ಕಜೆಕಾರ್ ಕೊಲೆಂಜಿಲೋಡಿ ಶ್ರೀನಿಧಿ ವಾರಿಜ ಸುಂದರ ಪೂಜಾರಿ (ಓಡಿಸಿದವರು: ಒಂಟಿಕಟ್ಟೆ ರಿತೇಶ್) ನೇಗಿಲು ಸಬ್ ಜೂನಿಯರ್ ವಿಭಾಗ : ಪ್ರಥಮ: ಪಣೋಳಿಬೈಲು ಭಂಡಾರದ ಮನೆ ರಮೇಶ್ ಕುಲಾಲ್ “ಎ” (ಓಡಿಸಿದವರು: ಪಟ್ಟೆ ಗುರುಚರಣ್) ದ್ವಿತೀ: ಕಕ್ಕೆಪದವು ಪೆಂರ್ಗಾಲು ಶಿವಮ್ಮ ವೆಂಕಪ್ಪ ಗೌಡ (ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್)

ಸಮಿತಿ ಸಂಚಾಲಕ ಬಿ.ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಪಾಧ್ಯಕ್ಷರಾದ ಅವಿಲ್ ಮಿನೇಜಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಕೆ. ಮಾಯಿಲಪ್ಪ ಸಾಲ್ಯಾನ್, ಕೋಶಾಧಿಕಾರಿ ಫಿಲಿಪ್ ಫ್ರಾಂಕ್, ನಾವೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ ಕುಲಾಲ್, ಉಪಾಧ್ಯಕ್ಷೆ ಲವೀನ ವಿಲ್ಮಾ ಮೊರಾಸ್, ನಿವೃತ್ತ ತಹಶೀಲ್ದಾರ್ ಕೆ.ಮೋಹನ ರಾವ್, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಹಿರಿಯ ಪತ್ರಕರ್ತ ವಾಲ್ಟರ್ ನಂದಳಿಕೆ, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ ಪುಂಜಾಲಕಟ್ಟೆ ಪ್ರಮುಖರಾದ ಕೆ.ಪದ್ಮನಾಭ ರೈ, ಸಂಜೀವ ಪೂಜಾರಿ ಮೆಲ್ಕಾರ್, ಜಗನ್ನಾಥ ಚೌಟ ಬದಿಗುಡ್ಡೆ, ಸಮಿತಿ ಅಧ್ಯಕ್ಷ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್ ಸ್ವಾಗತಿಸಿ, ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಮತ್ತು ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *