ಬಂಟ್ವಾಳ: ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಇಂದು ಗುರುವಾರ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಮಹಾವೀರ ಜಯಂತಿ ಆಚರಣೆಯನ್ನು ಆಚರಿಸಲಾಯಿತು. ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ ಅಹಿಂಸೆಯೇ ಪರಮ ಧರ್ಮ ಎಂದು ಮಹಾವೀರರು ಸಾರಿದ್ದಾರೆ. ಈ ಅಹಿಂಸೆಯ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪ್ರಪಂಚವೇ ಶಾಂತಿ ಮತ್ತು ನೆಮ್ಮದಿಯಿಂದ ತುಂಬಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷರಾದ ಶ್ರೀಯುತ ದೀಪಕ್ ಕುಮಾರ್ ಜೈನ್ ಅವರು ಮಾತನಾಡಿ ತ್ಯಾಗದಿಂದ ಸುಖ, ಅಹಿಂಸೆಯಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಜೀವ ನೀಡುವ ಶಕ್ತಿ ಇಲ್ಲದವರಿಗೆ ಜೀವ ತೆಗೆಯುವ ಹಕ್ಕು ಸಹ ಇಲ್ಲ. ಆದ್ದರಿಂದ ಎಲ್ಲರೂ ಅಹಿಂಸೆಯ ತತ್ವವನ್ನು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಪಟ್ಟಾಜೆ ಜಿನರಾಜ ಅರಿಗ, ಶ್ರೀಮತಿ ವಿಜಯ ಇಂದ್ರ, ಮನ್ಮಥರಾಜ ಕಾಜವ, ಮದುಶ್ರೀ ಜೀತೇಶ್, ಸನ್ಮತಿ ಜಯಕೀರ್ತಿ, ಹೇಮಂತ್ ಜೈನ್,ಹರ್ಷರಾಜ್ ಬಲ್ಲಾಳ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕರಾದ ವಿಜಯ್ ಆರ್, ಸಂತೋಷ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಹಾಜರಿದ್ದರು. ಉಪತಹಸೀಲ್ದಾರ್ ದಿವಾಕರ ಮುಗುಳಿಯ ಸ್ವಾಗತಿಸಿ ಗ್ರಾಮ ಲೆಕ್ಕಾಧಿಕಾರಿ ಕುಮಾರ್ ಟಿ.ಸಿ ವಂದಿಸಿದರು.
