ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಎ.10ರಂದು ಭಾನುವಾರ ರಾತ್ರಿ ರಕ್ತೇಶ್ವರಿ ದೈವದ ನೇಮೋತ್ಸವ ನಡೆಯಿತು.
ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಚೌಟ, ಕೆ.ಸುಂದರ ಹೊಳ್ಳ, ರವೀಂದ್ರ ಪೂಜಾರಿ, ರಾಜಾ ಎಸ್.ಹೊಳ್ಳ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಶ್ರೀನಿವಾಸ ಪಿ. ಸಪಲ್ಯ ಮುಂಬೈ, ರಾಜೇಶ ಶೆಟ್ಟಿ ಸೀತಾಳ, ಯಶೋಧರ ರೈ ದೇರಾಜೆಗುತ್ತು, ಶೇಖರ ಅಂಚನ್ ಪಿಲ್ಕಾಜೆಗುತ್ತು ಮತ್ತಿತರರು ಇದ್ದರು.
