ಬಂಟ್ವಾಳ : ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ , ಕುಕ್ಕಾಜೆ ಇರಾ ಗ್ರಾಮದಲ್ಲಿ ನ.ರಂದು ಮಂಗಳವಾರ ಸೂರ್ಯೋದಯದಿಂದ ನ.11ರ ಸೂರ್ಯೋದಯದವರೆಗೆ 7 ದಿವಸಗಳ ನಡೆಯಲಿರುವ ಅಖಂಡ ಭಜನಾ ಸಪ್ತಾಹಕ್ಕೆ ಉದ್ಯಮಿ ಇರಾ ಜಯರಾಮ ರಾವ್ ಅಲ್ಕೀರು ರವರು ದೀಪೋಜ್ವಲನಗೈದರು.

ಪ್ರಾತಃಕಾಲ ಶ್ರೀ ಮಹಾಗಣಪತಿ ಹೋಮ ಮತ್ತು ಸಾಮೂಹಿಕ ಪ್ರಾರ್ಥನೆ ಜರಗಿತು. ಈ ಸಂದರ್ಭದಲ್ಲಿ ಶ್ರೀಪತಿ ರಾವ್ , ನ್ಯಾಯವಾದಿ ಚಿದಾನಂದ ರಾವ್ ಪತ್ತುಮುಡಿ , ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ , ಸಪ್ತಾಹ ಸಮಿತಿ ಗೌರವಾಧ್ಯಕ್ಷ ವಿಠಲ ಪ್ರಭು ಪತ್ತುಮುಡಿ , ಕೋಶಾಧಿಕಾರಿ ಸಿ.ಎಚ್.ಸೀತಾರಾಮ ಶೆಟ್ಟಿ , ಗಣೇಶ್ ಆಚಾರ್ಯ ಕುಕ್ಕಾಜೆ , ಕೋಶಾಧಿಕಾರಿ ರವೀಂದ್ರ ಕುಕ್ಕಾಜೆ ಹಾಗೂ ಊರ ಎಲ್ಲಾ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು .
