ಕೈಕಂಬ : ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ(೧೬೯) ಗುರುಪುರ ಅಣೆಬಳಿಯಲ್ಲಿ ಮಂಗಳವಾರ ರಾತ್ರಿ ಸುಮಾರು ೮ ಗಂಟೆಯ ಹೊತ್ತಿಗೆ ಮಂಗಳೂರಿಗೆ ಹೋಗುತ್ತಿದ್ದ ಲಾರಿಯೊಂದು ಸುಮಾರು ೩೦ ಅಡಿ ಆಳ ಕಮರಿಗೆ ಉರುಳಿ ಬಿದ್ದ ದುರ್ಘಟನೆ ಸಂಭವಿಸಿದೆ.
ಎದುರು ದಿಕ್ಕಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಸೈಡ್ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿದ ಖಾಲಿ ಲಾರಿ ರಸ್ತೆ ಬದಿಯಿಂದ ಕೆಳಗುರುಳಿ ಮರಕ್ಕೆ ಸಿಕ್ಕಿಕೊಂಡಿತು. ಅದೇ ವೇಳೆ ಚಾಲಕ ಯಾವುದೇ ಗಾಯವಿಲ್ಲದೆ ಮೇಲಕ್ಕೆ ಬಂದಿದ್ದಾರೆ. ಬಳಿಕ ಲಾರಿ ಇನ್ನೂ ಆಳಕ್ಕೆ ಉರುಳಿದ್ದು, ನುಜ್ಜುಗುಜ್ಜಾಗಿದೆ.

