ಬಂಟ್ವಾಳ: ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ಎಂಬಲ್ಲಿ ಭಾನುವಾರ ಏರ್ಪಡಿಸಿದ್ದ ಹಿರಿಯ ಧಾರ್ಮಿಕ ಮುಖಂಡ ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ಇವರ ೧೦೦ನೇ ಜನ್ಮದಿನ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಸಂಘಟಕ ಬಡಾಜೆಗುತ್ತು ರವಿಶಂಕರ ಶೆಟ್ಟಿ ಮತ್ತಿತರರು ಇದ್ದರು.13btl-Badaje

ಉಕ್ರೇನ್ ಮತ್ತು ರಷ್ಯಾ ದೇಶಗಳ ಯುದ್ಧದ ಭೀತಿ ನಡುವೆಯೂ ಭಾರತೀಯರು ಮಾತ್ರವಲ್ಲದೆ ನೆರೆ ರಾಷ್ಟ್ರಗಳ ವಿವಿಧ ಜಾತಿ ಮತ್ತು ಧರ್ಮಗಳ ವೈದ್ಯಕೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದಿರುವ ಭಾರತ ಸರ್ಕಾರದ ಕ್ರಮ ದೇಶದ ಜಾತ್ಯಾತೀತ ಪರಂಪರೆಯ ಹಿರಿಮೆ ಜಗತ್ತಿಗೆ ಸಾರಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಇಲ್ಲಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ಎಂಬಲ್ಲಿ ಭಾನುವಾರ ಏರ್ಪಡಿಸಿದ್ದ ಹಿರಿಯ ಧಾರ್ಮಿಕ ಮುಖಂಡ ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ಇವರ ೧೦೦ನೇ ಜನ್ಮದಿನ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಶತಾಯುಷಿ ಬಾಲಕೃಷ್ಣ ಶೆಟ್ಟಿ ಅವರ ಧಾರ್ಮಿಕ ಪ್ರಜ್ಞೆ ಅವರ ಪುತ್ರ ರವಿಶಂಕರ ಶೆಟ್ಟಿ ಇವರು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.

ಧರ್ಮಸ್ಥಳ ಕ್ಷೇತ್ರದ ಡಿ.ಹರ್ಷೇಂದ್ರ ಕುಮಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಪೊಳಲಿ ವಿವೇಕ ಚೈತನ್ಯಾನಂದ ಸ್ವಾಮೀಜಿ , ಮೊಡಂಕಾಪು ಚರ್ಚಿನ ಧರ್ಮಗುರು ವಲೇರಿಯನ್ ಡಿಸೋಜ, ಕಾಟಿಪಳ್ಳ ಬೊಕ್ಕಪಟ್ನ ಹಿರಿಯ ಖತೀಬ ಮೌಲಾನಾ ಅಜೀಜ್ ದಾರಿಮಿ, ಬೆಂಗಳೂರು ಅಪರ ಪೊಲೀಸ್ ಮಹಾನಿರ್ದೇಶಕ ಬಿ.ದಯಾನಂದ, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಶುಭ ಹಾರೈಸಿದರು.

ಸನ್ಮಾನ:
ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ್ ವಿಟ್ಲ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಖೃತ ಡಾ.ರಾಜೇಂದ್ರ ಶೆಟ್ಟಿ,ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಮುಖ್ಯಮಂತ್ರಿ ಪದಕ ವಿಜೇತ ಪೊಲೀಸರು, ಹಿರಿಯ ಪತ್ರಕರ್ತರು ಸಹಿತ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಉದ್ಯಮಿ ಕೆ.ಡಿ.ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಅಂಬೇಡ್ಕರ್ ನಿಗಮ ಅಧ್ಯಕ್ಷ ಮುನಿಕೃಷ್ಣ, ಬಿಬಿಎಂಪಿ ಸದಸ್ಯ ನಾಗರಾಜ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಹೈಕೋಟ್ ೯ ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿ, ಲೋಕಾಯುಕ್ತ ನಿವೃತ್ತ ನ್ಯಾಯಧೀಶ ವಿಶ್ವನಾಥ ಶೆಟ್ಟಿ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಸುಕುಮಾರ ಶೆಟ್ಟಿ ಬೈಂದೂರು, ವಿಧಾನಪರಿಷತ್ ಸದಸ್ಯ, ಬಿ.ಎಂ.ಫಾರೂಕ್, ಡಾ.ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ಕೆ.ವಸಂತ ಬಂಗೇರ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಎ.ರುಕ್ಮಯ ಪೂಜಾರಿ, ಎಐಐಸಿ ಕಾರ್ಯದರ್ಶಿ ಪಿ.ವಿ.ಮೋಹನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬೂಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಎಸ್ಪಿ ಭಗವಾನ್ ಹೃಷಿಕೇಶ್ ಸೋನಾವಾಣೆೆ, ಡಿವೈಎಸ್ಪಿ ಪ್ರತಾಪ ಸಿಂಹ ಥೋರಟ್, ತುಮಕೂರು ಲೋಕಾಯುಕ್ತ ಎಸ್ಪಿ ವಾಲಿ ಪಾಷ, ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಎ.ಜೆ.ಸಮೂಹ ಸಂಸ್ಥೆ ಅಧ್ಯಕ್ಷ ಎ.ಜೆ.ಶೆಟ್ಟಿ, ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ವಿಜಯಪ್ರಕಾಶ್, ಅದಾನಿ ಗ್ರೂಪ್ ಸಿಇಒ ಕಿಶೋರ್ ಆಳ್ವ ಮತ್ತಿತರ ಗಣ್ಯರು ಇದ್ದರು.

ಸಂಘಟಕ ಬಡಾಜೆಗುತ್ತು ರವಿಶಂಕರ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕೊಡಾಜೆ ಬಾಲಕೃಷ್ಣ ಶೆಟ್ಟಿ ಮತ್ತು ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಪಟ್ಲ- ಜನ್ಸಾಲೆ, ಕಾವ್ಯಶ್ರೀ ಭಾಗವತಿಕೆಯಲ್ಲಿ ಯಕ್ಷ- ಗಾನ -ವೈಭವ ಕಾರ್ಯಕ್ರಮ ನಡೆಯಿತು

By suddi9

Leave a Reply

Your email address will not be published. Required fields are marked *