ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ಹಿರಿಯ ಜೇಸಿಗಳ ಬಂಟ್ವಾಳ ನೇತ್ರಾವತಿ ಸಂಗಮ ನೂತನ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸ್ಥೆ ರಾಷ್ಟ್ರಧ್ಯಕ್ಷ ಕೇದಿಗೆ ಅರವಿಂದ ರಾವ್ ಇವರನ್ನು ಸನ್ಮಾನಿಸಲಾಯಿತು.7btl-JCI

ಜೆಸಿಐ ಸಂಸ್ಥೆಯಲ್ಲಿ ದುಡಿದವರು ನಿಷ್ಕ್ರಿಯರಾಗದೆ ಅಂತರ್ ರಾಷ್ಟ್ರೀಯ ಸೀನಿಯರ್ ಛೇಂಬರ್ ಸಂಸ್ಥೆಯಲ್ಲಿ ಸೇವಾ ಚಟುವಟಿಕೆ ಮುಂದುವರಿಸಬೇಕು. ಹಿರಿಯ ನಾಗರಿಕರಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮೂಲಕ ಕ್ರಿಯಾಶೀಲರಾಗಬೇಕು ಎಂದು ಎಸ್ ಸಿ ಐ ಸಂಸ್ಥೆ ರಾಷ್ಟ್ರಧ್ಯಕ್ಷ ಕೇದಿಗೆ ಅರವಿಂದ ರಾವ್ ಹೇಳಿದರು.

ಇಲ್ಲಿನ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ಹಿರಿಯ ಜೇಸಿಗಳ ಬಂಟ್ವಾಳ ನೇತ್ರಾವತಿ ಸಂಗಮ ನೂತನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರು ಘಟಕ ಅಧ್ಯಕ್ಷ ಹರಿಪ್ರಸಾದ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಸಾರ್ವಜನಿಕ ಸಂಪರ್ಕ ಸಮಿತಿ ವಲಯಾಧಿಕಾರಿ ಜಯಪ್ರಕಾಶ್ ರಾವ್ ಪುತ್ತೂರು, ರಾಜ್ಯ ವಿಸ್ತರಣಾಧಿಕಾರಿ ನವೀನ್ ಅಮೀನ್ ಶುಭ ಹಾರೈಸಿದರು.

ಸಂಸ್ಥೆ ರಾಷ್ಟ್ರೀಯ ನಿರ್ದೇಶಕ ಚಿತ್ರ ಕುಮಾರ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಂಟ್ವಾಳ ನೇತ್ರಾವತಿ ಸಂಗಮ ನೂತನ ಸ್ಥಾಪಕಾಧ್ಯಕ್ಷ ಜಯಾನಂದ ಪೆರಾಜೆ, ಉಪಾಧ್ಯಕ ಎಸ್.ಆರ್.ಪಟವರ್ಧನ್, ಕಾರ್ಯದರ್ಶಿ ಸತ್ಯನಾರಾಯಣ ರಾವ್, ಕೋಶಾಧಿಕಾರಿ ಬಿ.ಆರ್. ರಾವ್, ಜೊತೆ ಕಾರ್ಯದರ್ಶಿ ಪಿ. ಮಹಮ್ಮದ್ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯದರ್ಶಿ ಶಾಲಿನಿ ಪ್ರಶಾಂತ್, ಪ್ರಮುಖರಾದ ಪ್ರೊ. ವೃಷಭರಾಜ್ ಜೈನ್, ಮಹಾಬಲೇಶ್ವರ ಹೆಬ್ಬಾರ್, ಬಿ.ರಾಮಚಂದ್ರ ರಾವ್, ವಕೀಲ ಉಮೇಶ್ ಏಣಾಜೆ, ರಾಧಾಕೃಷ್ಣ ಬಂಟ್ವಾಳ, ಜೆಸಿಐ ಅಧ್ಯಕ್ಷ ಹರಿಪ್ರಸಾದ್, ಮಹಮ್ಮದ್ ಮುಸ್ತಾಫ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *