ಬೆಳ್ಳೂರು : ಸರಿಸುಮಾರು 36 ವರ್ಷಗಳಿಂದ ಶ್ರೀ ಗುರುರಾಘವೇಂದ್ರ ಸ್ವಾಮಿ ದೇವರನ್ನು ಆರಾಧಿಸುತ್ತಾ ಬಂದಿರುವ ಶ್ರೀ ಗುರುರಾಘವೇಂದ್ರ ಸ್ವಾಮಿಯ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಮಾ.10ರಂದು ಗುರುವಾರದಿಂದ ಮಾ.12ರಂದು ಶನಿವಾರದವರೆಗೆ ನಡೆಯಲಿರುವುದು

ಶ್ರೀ ಗುರು ರಾಘವೇಂದ್ರ ಸ್ವಾಮಿಗೆ ಊರ ಮತ್ತು ಪರವುರ ಹತ್ತು ಸಮಸ್ತರ ಉದಾರ ಕೊಡುಗೆಯಿಂದ ಶ್ರೀ ದೇವರಿಗೆ ಗುಡಿ ಪೂರ್ಣಗೊಂಡಿದ್ದು, ಇದೀಗ 10 ವರ್ಷಗಳಿಂದ ಪ್ರತೀ ವರ್ಷವೂ ವಾರ್ಷಿಕ ವರ್ಧಂತಿ ಉತ್ಸವವು ನಡೆಯುತ್ತಲಿದೆ ಎಂದು ಮೊಕ್ತೇಸರ ಶಂಕರಸ್ವಾಮಿ ಶ್ರೀ ಗುರುರಾಘವೇಂದ್ರ ಮಠ ಜ್ಞಾನ ದೇಗುಲ ಟ್ರಸ್ಟ್ (ರಿ) ಬೆಳ್ಳೂರು ಅಜಿನಡ್ಕ, ಬಂಟ್ವಾಳ, ತಿಳಿಸಿದ್ದಾರೆ.

ಕಾರ್ಯಕ್ರಮಗಳ ವಿವರ

ಮಾ.10ರಂದು ಗುರುವಾರ ಬೆಳಿಗ್ಗೆ ಗಂಟೆ 9:00ಕ್ಕೆ ಶಿವಸೂಜೆ, ಬೆಳಿಗ್ಗೆ 9:30ಕ್ಕೆ ಸಾರ್ವಜನಿಕ ಸೀಯಾಳಾಭಿಷೇಕ,  ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ಸಂಜೆ ಗಂಟೆ 6:00ಕ್ಕೆ ಭಜನಾ ಕಾರ್ಯಕ್ರಮ ರಾತ್ರಿ ಗಂಟೆ 8:00ಕ್ಕೆ ಮಹಾಪೂಜೆ

ಮಾ.11ರಂದು ಶುಕ್ರವಾರ ಬೆಳಿಗ್ಗೆ ಗಂಟೆ 8:00ಕ್ಕೆ ನಾಗತಂಬಿಲ, ತನು ಅಭಿಷೇಕ ಮತ್ತು ನಿತ್ಯಪೂಜೆ ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಸಂಜೆ ಗಂಟೆ 6:30ಕ್ಕೆ ಮಹಾಗಣಪತಿ ದೇವರಿಗೆ ಪಲ್ಲಪೂಜೆ ರಾತ್ರಿ ಗಂಟೆ 7:00ಕ್ಕೆ ಗಾಯತ್ರಿಪೂಜೆ, ನಂತರ ಅನ್ನಸಂತರ್ಪಣೆ ರಾತ್ರಿ ಗಂಟೆ 9:00ಕ್ಕೆ ಕತ್ತಲೆ ಕಾಣದ ಗುಳಗನಿಗೆ ಕೋಲಸೇವೆ

ಮಾ.12ರಂದು ಶನಿವಾರ ಬ್ರಹ್ಮದೇವರಿಗೆ ಪೂಜೆ ಮತ್ತು ಅಭಿಷೇಕ, ನಿತ್ಯಪೂಜೆ ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಸಂಜೆ 6:00 ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ ನಂತರ ಅನ್ನಸಂತರ್ಪಣೆ ರಾತ್ರಿ ಮಹಾಪೂಜೆ

By suddi9

Leave a Reply

Your email address will not be published. Required fields are marked *