ಬಂಟ್ವಾಳ:ಬಿ.ಸಿ.ರೋಡ್ ತಾಲ್ಲೂಕು ಕಚೇರಿ ಎದುರಿನ ಸಾರ್ವಜನಿಕ ರಂಗಮಂದಿರದಲ್ಲಿ ಶನಿವಾರ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಪುಟ್ಟ ಬಾಲಕಿಯನ್ನು ಕೂರಿಸಿ ತೆರಳಿದ ತಾಯಿಯನ್ನು ಬಳಿಕ ಬಾಲಕಿ ಹುಡುಕಾಟ ನಡೆಸಿದ ಘಟನೆ ಶನಿವಾರ ನಡೆದಿದೆ.
ಶನಿವಾರ ಬೆಳಿಗ್ಗೆ ಕನ್ನಡ ರಾಜ್ಯೋತ್ಸವದ ಪಥಸಂಚಲನ, ಧ್ವಜಾರೋಹಣ, ಭಾಷಣ, ಸನ್ಮಾನ ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನ ವೇಳೆ ಸ್ಥಳೀಯ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು.
1btl-farvin

ಇದೇ ವೇಳೆ ಪುಟ್ಟ ತಾಯಿಯೊಂದಿಗೆ ಕಲ್ಲಡ್ಕದಿಂದ ಬಂದಿದ್ದ ಬಾಲಕಿ ಫವರ್ಿನ್ನನ್ನು ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಹೇಳಿ ಸಭಾಂಗಣದಲ್ಲಿನ ಕುಚರ್ಿಯಲ್ಲಿ ಕೂರಿಸಿದ ಆಕೆಯ ತಾಯಿ ಬಿ.ಸಿ.ರೋಡ್ ಪೇಟೆಯ ಬ್ಯಾಂಕಿಗೆ ತೆರಳಿದ್ದರು ಎನ್ನಲಾಗಿದೆ. ಈ ನಡುವೆ ಸಾಂಸ್ಕೃತಿಕ ಕಾರ್ಯಕ್ರಮ

ಮುಗಿಯುತ್ತಿದ್ದಂತೆಯೇ ಪ್ರೇಕ್ಷಕರೂ ವಾಪಾಸಾಗಿದ್ದಾರೆ. ಇದೇ ವೇಳೆ ಬಾಲಕಿ ಫವರ್ಿನ್ ಮಾತ್ರ ಅಳುತ್ತಾ ಏಕಾಂಗಿಯಾಗಿ ಕುಳಿತು ತಾಯಿ ಎಲ್ಲಿ…? ಎಂದು ಹುಡುಕಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಕಂದಾಯ ಇಲಾಖೆ ಸಿಬ್ಬಂದಿಗಳು ಮತ್ತು ಸ್ಥಳೀಯ ವಾಹನ ಚಾಲಕರು ಆಕೆಯನ್ನು ವಿಚಾರಿಸುತ್ತಿದ್ದಂತೆಯೇ ದೂರದಲ್ಲಿ ಹೋಗುತ್ತಿದ್ದ ತನ್ನ ತಾಯಿಯನ್ನು ಗುರುತಿಸಿದ ಬಾಲಕಿ ಆಕೆಯೊಂದಿಗೆ ತೆರಳುವ ಮೂಲಕ ಸ್ಥಳೀಯರಲ್ಲಿ ಉಂಟಾಗಿದ್ದ ಆತಂಕ ಶನಮಗೊಂಡಿತು.

By suddi9

Leave a Reply

Your email address will not be published. Required fields are marked *