ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ತೆಂಗಿನ ಸಸಿ ವಿತರಿಸಿದರು. ಬೇಬಿ ಕುಂದರ್, ಸುಧೀಂದ್ರ ಶೆಟ್ಟಿ, ಸುಧಾಕರ ಶೆಟ್ಟಿ ಮತ್ತಿತರರು ಇದ್ದಾರೆ.
ರಾಜ್ಯದಲ್ಲಿ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರವು ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ದಬ್ಬಾಳಿಕೆ ನಡೆಸುವುದನ್ನು ಎಂದಿಗೂ ಸಹಿಸಲು ಅಸಾಧ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಗುಡುಗಿದ್ದಾರೆ.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ಶುಕ್ರವಾರ ಸಂಜೆ ಭೇಟಿ ನೀಡಿ ತೆಂಗಿನ ಸಸಿ ವಿತರಿಸಿದ ಬಳಿಕ ಅವರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಬಿಜೆಪಿ ವಿರುದ್ಧ ಯುವಕರ ದಂಡು ಕಾಂಗ್ರೆಸ್ ಕಡೆಗೆ ಬರುತ್ತಿದೆ ಎಂದರು. ಇದೇ ವೇಳೆ ಬೂತ್ ಸಮಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಮತ್ತು ಸುಧಾಕರ ಶೆಟ್ಟಿ ಅಟ್ಲಬೆಟ್ಟು ಇವರಿಗೆ ತೆಂಗಿನ ಸಸಿ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ. ಪದ್ಮಶೇಖರ್ ಜೈನ್, ಹಿಂದುಳಿದ ವರ್ಗ ಘಟಕ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮಹಮ್ಮದ್ ಶರೀಫ್, ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಜೋರಾ, ವಲಯ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ ಶಾಂತಿ, ಪ್ರಮುಖರಾದ ಉದಯ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ ಕುತ್ಲೋಡಿ, ಮಹಮ್ಮದ್ ಸಂಗಬೆಟ್ಟು, ಜಯಕರ ಶೆಟ್ಟಿ, ರಮೇಶ್ ಪೂಜಾರಿ, ಜನಾರ್ಧನ ಬಂಗೇರಾ, ಸದಾಶಿವ ಶೆಟ್ಟಿ, ನಾಗೇಶ್ ಶೆಟ್ಟಿ, ಅನಿಲ್ ಡಿಸೋಜ, ಅಮರ್ ನಾಥ್ ನಾಯ್ಕ್, ಅಶ್ವಥ್ ಶೆಟ್ಟಿ, ಅಶೋಕ್ ಪೂಜಾರಿ, ಆನಂದ ಶೆಟ್ಟಿ, ರಘುರಾಮ್ ಶೆಟ್ಟಿ, ಲೋಕನಾಥ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಭಾರತಿ ಶೆಟ್ಟಿ, ಸುನಿತಾ ಶೆಟ್ಟಿ, ಜಲಜಾಕ್ಷಿ, ಗಿರಿಜಾ ಶೆಟ್ಟಿ, ದೇಜಮ್ಮ, ಅಬ್ದುಲ್ ಬಶೀರ್ ಸಾಹೇಬ್, ಹರೀಶ್ ಶೆಟ್ಟಿ ಇದ್ದರು.
