ಮಂಗಳೂರು : ಸಿಬಿಐಯಲ್ಲಿ ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಕುಡುಪು ಸುದರ್ಶನ್ ಅವರು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಅಡಿಯಲ್ಲಿ ಹೆಚ್ಚುವರಿ ಸರಕಾರಿ ವಕೀಲರಾಗಿ ನೇಮಕಗೊಂಡಿದ್ದಾರೆ. ಹೈದರಾಬಾದಿನ ಸಿಬಿಐ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಕೆಲವೇ ದಿನಗಳಲ್ಲಿ ಹೊಸದಿಲ್ಲಿಯಲ್ಲಿ ತನ್ನ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಮಂಗಳೂರಿನ ಕುಡುಪು ಮೂಲದ ಅವರು ಇತ್ತೀಚೆಗಷ್ಟೇ ಸಿಬಿಐಯ 2021ನೇ ಸಾಲಿನ ಉತ್ಕೃಷ್ಟ ಸೇವಾ ಪದಕ ಪಡೆದಿದ್ದರು. ಕೆಲವು ವಾರಗಳ ಹಿಂದೆ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ)ವು ಕುಡುಪು ಸುದರ್ಶನ್ ಅವರ ಹೆಸರನ್ನು ಹೆಚ್ಚುವರಿ ಸರಕಾರಿ ವಕೀಲರ ಹುದ್ದೆಗೆ ಶಿಫಾರಸು ಮಾಡಿತ್ತು.
