ಮೂಡುಬಿದರೆ: ತುಳುಕೂಟ ಮೂಡುಬಿದರೆ ಇದರ ಬೆಳ್ಳಿಹಬ್ಬ ಪ್ರಯುಕ್ತ ನ.11ರಂದು ಸಮಾಜಮಂದಿರದಲ್ಲಿ `ತುಳು ಐಸಿರಿ-2014 ಕಾರ್ಯಕ್ರಮ ನಡೆಯಲಿದೆ ಎಂದು ತುಳುಕೂಟ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್ ತಿಳಿಸಿದ್ದಾರೆ.
ಮೂಡುಬಿದರೆ ಪ್ರೆಸ್ ಕ್ಲಬ್ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದಾರೆ. ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ ಮಂಗಳೂರು ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಅತಿಥಿಗಳಾಗಿರುವರು. ಅಖಿಲ ಭಾರತ ತುಳು ಒಕ್ಕೂಟದ ದಿವಾಕರ ಶೆಟ್ಟಿ ಸಾಂಗ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಉದ್ಘಾಟನಾ ಸಮಾರಂಭದ ಬಳಿಕ ನವೀನ್ ಚಂದ್ರ ಕೊಪ್ಪ ಹಾಗೂ ತಂಡದವರಿಂದ ತುಳು ಕವಿತೆಗಳ ಹಾಡುಗಾರಿಕೆ, ಮಂಗಳೂರು ವಿ.ವಿ.ಯ ಉಪನ್ಯಾಸಕಿ ಡಾ.ರಾಜಶ್ರೀ ಅವರಿಂದ `ನಾಲಾಯಿರ್ದ್ ನಾಲೂರುಗ್’ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ. ಉದ್ಯಮಿ.ಕೆ.ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ತುಳು ಕವಿಗೋಷ್ಠಿ ನಡೆಯಲಿದೆ. ವಕೀಲ ಬಾಹುಬಲಿ ಪ್ರಸಾದ್ ಅಧ್ಯಕ್ಷತೆಯಲ್ಲಿ ಡಾ.ಕಿಶೋರ್ ಕುಮಾರ್ ರೈ ತುಳು ಜಾನಪದ ನಡವಳಿಲು ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜು, ಶ್ರೀಮಹಾವೀರ ಕಾಲೇಜು, ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾಥರ್ಿಗಳಿಂದ ತುಳು ಸಾಂಸ್ಕೃತಿಕ ವೈವಿದ್ಯತೆಗಳು ನಡೆಯಲಿದೆ.
ಕನರ್ಾಟಕ ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲು, ಮೂಡುಬಿದರೆ ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಮುರಳೀಧರ್ ಅತಿಥಿಗಳಾಗಿರುವರು. ಸಮಾರಂಭದಲ್ಲಿ ಉಡಲ್ ತುಳು ಪತ್ರಿಕೆಯ ಸಂಪಾದಕಿ ಜಯಂತಿ.ಎಸ್.ಬಂಗೇರ ಅವರನ್ನು ಸನ್ಮಾನಿಸಲಾಗುತ್ತದೆ. ಸಭಾ ಕಾರ್ಯಕ್ರಮದ ಬಳಿಕ ಅಶೋಕ್ ಹಾಲಯ್ ಅವರು ನಿಮರ್ಿಸಿದ ಪೂರಾಪೊಕ್ಕಡೆ ತುಳು ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.
ತುಳು ಕೂಟ ಕಾಯರ್ಾಧ್ಯಕ್ಷ ಚಂದ್ರಹಾಸ ದೇವಾಡಿಗ, ರೈತ ಮುಖಂಡರಾದ ಧನಕೀತರ್ಿ ಬಲಿಪ, ರಘುರಾಮ ಶೆಟ್ಟಿ, ವಕೀಲ ಬಾಹುಬಲಿ ಪ್ರಸಾದ್ ಸುದ್ದಿಗೋಷ್ಠಿಯಲ್ಲಿದ್ದರು.
