ಕೈಕಂಬ: ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿ ನೇಮೋತ್ಸವದ ಪ್ರಯುಕ್ತ ಫೆ. ೧೭ರಂದು ಗುರುವಾರ ಬೆಳಿಗ್ಗೆ ೮.೪೫ಕ್ಕೆ ಸಪರಿವಾರ ಕೊರ್ದಬ್ಬು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ನಡೆದು ಶ್ರೀ ದೈವಗಳ ದರ್ಶನ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸುಕೇಶ್ ಚೌಟ ಬಡಕಬೈಲು, ಚಂದ್ರಶೇಖರ ಶೆಟ್ಟಿ ಬಡಕಬೈಲು, ಕಾರ್ಯದರ್ಶಿ ಶೇಖರ ಬಂಗೇರ ಗಾಣೆಮಾರ್, ಪ್ರಧಾನ ಕಾರ್ಯದರ್ಶಿ ದೇವದಾಸ್ ಅಯರೆಮಾರ್, ಕರಿಯಂಗಳ ಗ್ರಾಮ ಪಂ.ಅಧ್ಯಕ್ಷ ಚಂದ್ರಹಾಸ್ ಪಲ್ಲಿಪಾಡಿ, ವೆಂಕಟೇಶ್ ನಾವುಡ ಪೊಳಲಿ, ಶ್ರೀಕರ ಶೆಟ್ಟಿ ಬೊಳಿಯಾರು, ಉಮೇಶ್ ಸಾಲ್ಯಾನ್ ಬೆಂಜನಪದವು, ಸಂಕಪ್ಪ ಶೇಖ ಬಡಕಬೈಲು, ನಾರಾಯಣ ಪೂಜಾರಿ ಆಯರೆಮಾರ್,ಗೋಪಾಲ ಅಂಚನ್ ಬಡಕಬೈಲು, ನಾರಾಯಣ ಬಿ. ಬಡಕಬೈಲು, ಶ್ರೀ ದೇವಪ್ಪ ಭಂಡಾರಿ ಪುಂಚಮೆ, ವಾಮನ ಪೂಚಾರಿ ಮೀಯಾಳ, ಉವಯ್ಯ ಪೂಜಾರಿ ಆಯರೆಮಾರ್, ಕೋಟ್ಯಪ್ಪ ಟೈಲರ್ ಬಡಕಬೈಲು, ವಾಮನ ಪೂಜಾರಿ ಸೂರ್ಲ ಮಣಿಕಂಠಪುರ, ಶಶಿಧರ ಮಂಗಾಜೆ, ಚರಣ್ ಶ್ರೀಕೃಷ್ಣನಗರ ಬಡಕಬೈಲು, ಜನಾರ್ದನ ಶೆಟ್ಟಿ ಕನ್ಯಾಬೆಟ್ಟು ಶ್ರೀ ಸೋಮಶೇಖರ ಪೊಳಲಿ, ಶ್ರೀ ನಾರಾಯಣ ಬಡಕಬೈಲು (ಫಿತರೀಶ್ ), ಶ್ರೀ ಕಿರಣ್ ಮಿಯಾಳ, ರಾಜೇಶ್ ಹೆಗ್ಡೆ ಮಂಗಾಜೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.


