ಬಂಟ್ವಾಳ: ಶ್ರೀರಾಮ ಭಜನಾ ಮಂದಿರ ಬಿ.ಸಿರೋಡ್ ಇದರ ಜೀಣರ್ೋದ್ದಾರವನ್ನು ಮಾಡುವ ಬಗ್ಗೆ ಅದಿತ್ಯವಾರ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು. ಮುಂದಿನ ಜೀಣರ್ೋದ್ದಾರವನ್ನು ಮಾಡುವ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ರಚಿಸಲು ನ.16 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಸಭೆಯನ್ನು ಕರೆದಿದ್ದು ಊರಿನ ಭಕ್ತರು ಬಾಗವಹಿಸುವಂತೆ ಭಜನಾ ಮಂದಿರದ ಸಮಿತಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
