ಮಂಗಳೂರು: ನಗರದ ಹೊರವಲಯದ ಪಡೀಲ್-ಕಣ್ಣೂರು ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದ್ದ ಪುತ್ತುಮೋನು ಅಲಿಯಾಸ್ ಸಣ್ಣಪುತ್ತ ಕೊಲೆ ಪ್ರಕರಣದ ಆರೋಪಿ ಇಜಾಝ್ ಯಾನೆ ಇಜ್ಜ(26) ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತರನ್ನು ಕಣ್ಣೂರು ನಿವಾಸಿ ಮುಹಮ್ಮದ್ ಅನೀಝ್(22), ಅಡ್ಯಾರ್ಕಟ್ಟೆ ನಿವಾಸಿ ರಿಯಾಝ್ ಅಲಿಯಾಸ್ ಝಿಯಾ(30), ಕಣ್ಣೂರು ಯೂಸುಫ್ನಗರ ನಿವಾಸಿ ಮುಸ್ತಾಕ್ ಮುಹಮ್ಮದ್(30), ಗಾಣದಬೆಟ್ಟು ನಿವಾಸಿ ಮುಹಮ್ಮದ್ ಫಝಲ್(20), ಕಣ್ಣೂರು ನಿವಾಸಿ ಅಜ್ಮಾನ್(21), ಕಣ್ಣೂರು ನಿವಾಸಿಗಳಾದ ಹಸನಬ್ಬ(29), ಶಾಬಾಝ್(22) ಎಂದು ಹೆಸರಿಸಲಾಗಿದೆ.
ಇವರಲ್ಲಿ ಐದು ಮಂದಿ ನೇರವಾಗಿ ಭಾಗಿಯಾಗಿದ್ದರೆ ಇನ್ನಿಬ್ಬರು ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ. ರಿಯಾಝ್ ಮತ್ತು ಜಿಯಾ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕುಖ್ಯಾತ ಕ್ರಿಮಿನಲ್ಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಪುತ್ತಮೋನು ಇವರ ಸ್ನೇಹಿತನಾಗಿದ್ದು, ಆತನ ಕೊಲೆಗೈದ ಕಾರಣಕ್ಕೆ ಇಜಾಝ್ ಕೊಲೆಗೆ ಇವರು ಸಂಚು ರೂಪಿಸಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

