ಬಂಟ್ವಾಳ: ಇಲ್ಲಿನ ಕೊಯಿಲ ಗ್ರಾಮದ ಬುರಾಲು ಎಂಬಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.18ರಂದು ಮಂಗಳವಾರ ಬೆಳಕಿಗೆ ಬಂದಿದೆ. ಮೃತರನ್ನು ಸ್ಥಳೀಯ ನಿವಾಸಿ ಬೂಬ ಪೂಜಾರಿ ಇವರ ಪುತ್ರ ಮೋಹನ ಪೂಜಾರಿ(೪೭)ಎಂದು ಗುರುತಿಸಲಾಗಿದೆ.
ಕಳೆದ ೧೪ ವರ್ಷಗಳ ಹಿಂದೆ ವಿವಾಹವಾಗಿದ್ದ ಇವರಿಗೆ ಮಕ್ಕಳು ಇಲ್ಲದ ಚಿಂತೆ ಕಾಡುತ್ತಿದ್ದು, ಸೋಮವಾರ ತಡರಾತ್ರಿ ಸ್ಥಳೀಯ ಬೆರ್ಕೆ ಎಂಬಲ್ಲಿ ಪಾಳು ಬಿದ್ದ ಬಾವಿಗೆ ಹಾರಿದ್ದರು ಎಂದು ತಿಳಿದು ಬಂದಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಮಂಗಳವಾರ ಬಂದು ಮೃತದೇಹ ಮೇಲೆತ್ತಿರುವುದಾಗಿ ತಿಳಿಸಿದ್ದಾರೆ.
