ಬಂಟ್ವಾಳ: ತಾಲ್ಲೂಕಿನ ಕಾರಿಂಜ ಕ್ಷೇತ್ರ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆರಂಭಿಸಲಾದ ‘ಮನೆ ಸಂಪರ್ಕ ಜನ ಜಾಗರಣ ಅಭಿಯಾನ’ ಮೂರನೇ ಹಂತದ ಹೋರಾಟಕ್ಕೆ ಜ.14ರಂದು ಶುಕ್ರವಾರ ಚಾಲನೆ ನೀಡಲಾಯಿತು.14btl-Karinja

ಇಲ್ಲಿನ ಪುರಾಣ ಪ್ರಸಿದ್ದ ಕಾರಿಂಜ ಕ್ಷೇತ್ರ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆರಂಭಿಸಲಾದ ‘ಮನೆ ಸಂಪರ್ಕ ಜನ ಜಾಗರಣ ಅಭಿಯಾನ’ ಮೂರನೇ ಹಂತದ ಹೋರಾಟಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಪ್ರತೀ ಮನೆಗೆ ತೆರಳಿ ಕರಪತ್ರ ಹಂಚಿಕೆ ಮತ್ತು ಜನಜಾಗೃತಿ ಮೂಡಿಸುವುದರ ಜೊತೆಗೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಸಲ್ಲಿಸಲು ೪೮ ಗ್ರಾಮಗಳಿಂದ ಸಹಿ ಸಂಗ್ರಹವೂ ಆರಂಭಗೊಂಡಿದೆ ಎಂದು ವೇದಿಕೆ ಅಧ್ಯಕ್ಷ ತಿರುಲೇಶ್ ಬೆಳ್ಳೂರು ತಿಳಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಯೋಗೀಶ್ ತುಂಬೆ, ಸಂಪರ್ಕ ಪ್ರಮುಖ ರವಿ ಕೆಂಪುಗುಡ್ಡೆ, ನಗರ ಅಧ್ಯಕ್ಷ ಚಿದಾನಂದ ಕುಜ್ಲುಬೆಟ್ಟು, ಶ್ರೀಕಾಂತ್ ಕಾಯರಡ್ಕ, ನಮಿತ್ ವಗ್ಗ, ಪ್ರಸಾದ್ ವಗ್ಗ, ಶರತ್ ವಗ್ಗ, ದಿನೇಶ್ ಕಕ್ಯಪದವು ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *