Published On: Tue, Jan 11th, 2022

ಸಿದ್ಧಕಟ್ಟೆ: ಸಮಾಜ ಸೇವಾ ಸಹಕಾರಿ ಸಂಘ ೧೪ ರಂದು ೧೪ನೇ ಶಾಖೆ ಶುಭಾರಂಭ

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ೧೪ನೇ ಶಾಖೆ ಆರಂಭಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ಸಿದ್ಧಕಟ್ಟೆ ದುರ್ಗಾಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ಇದೇ ೧೪ರಂದು ಶುಕ್ರವಾರ ಬೆಳಿಗ್ಗೆ ೧೦.೩೦ ಗಂಟೆಗೆ ೧೪ನೇ ಶಾಖೆ ಶುಭಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಕುಲಾಲ್ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.10btl-Samaja Society

ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಶಾಖೆ ಉದ್ಘಾಟಿಸುವರು. ಸ್ಥಳೀಯ ಚರ್ಚಿನ ಧರ್ಮಗುರು ಡೇನಿಯಲ್ ಡಿಸೋಜ, ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ, ಕೆರೆಬಳಿ ಜುಮ್ಮಾ ಮಸೀದಿ ಧರ್ಮಗುರು ಗೌಸ್ ಮೊಯ್ದೀನ್ ಪೈಝಿ, ಸಂಗಬೆಟ್ಟು ಕ್ಷೇತ್ರದ ಚಂದ್ರಹಾಸ ಗುರಿಕಾರ, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ಸಂಘದ ಸಾಧನೆ:
ಕಳೆದ ೧೯೮೧ರಲ್ಲಿ ಸ್ವಾತಂತ್ರ್ಯ ಯೋಧ ದಿವಂಗತ ಡಾ.ಅಮ್ಮೆಂಬಳ ಬಾಳಪ್ಪ ಮತ್ತು ಹಿರಿಯ ಹೂವಯ್ಯ ಮೂಲ್ಯ ಇವರ ನೇತೃತ್ವದಲ್ಲಿ ಸಂಘವು ಸ್ಥಾಪನೆಗೊಂಡಿದೆ. ಕಳೆದ ಸಾಲಿನಲ್ಲಿ ರೂ ೬೧೯.೭೦ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ ೨,೦೬ ಕೋಟಿ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ ೧೫ರಷ್ಟು ಡಿವಿಡೆಂಡ್ ವಿತರಿಸಿದೆ. ಇದೀಗ ಒಟ್ಟು ೧೩ ಶಾಖೆಗಳನ್ನು ಹೊಂದಿದ್ದು, ೫೭ ಮಂದಿ ಸಿಬ್ಬಂದಿಗಳು ಇದ್ದಾರೆ. ಕಳೆದ ೨೦೦೬ರಲ್ಲಿ ಬೆಳ್ಳಿಹಬ್ಬ ಆಚರಿಸಿದ ಸಂಘವು ಗ್ರಾಹಕರಿಗೆ ಸೇಫ್ ಲಾಕರ್, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ೧೮೪ ಸ್ವಸಹಾಯ ಸಂಘಟಗಳ ರಚನೆ, ವಿದ್ಯಾರ್ಥಿ ವೇತನ ವಿತರಣೆ, ಇ ಸ್ಟ್ಯಾಂಪ್ ಸೌಲಭ್ಯ ನೀಡುತ್ತಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪದ್ಮನಾಭ ವಿ., ನಿರ್ದೇಶಕರಾದ ವಿಶ್ವನಾಥ ಕೆ.ಬಿ., ರಮೇಶ ಸಾಲ್ಯಾನ್, ಜನಾರ್ಧನ ಬೊಂಡಾಲ, ಅರುಣ್ ಕುಮಾರ್, ಬಿ.ರಮೇಶ ಸಾಲ್ಯಾನ್, ನಾಗೇಶ ಬಿ., ವಾಮನ ಟೈಲರ್, ಸುರೇಶ ಎನ್., ವಿಜಯ ಕುಮಾರ್, ಜಯಂತಿ, ವಿದ್ಯಾ, ಜಗನ್ನಿವಾಸ ಗೌಡ, ಗಣೇಶ ಸಮಗಾರ, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter