ಬಂಟ್ಚಾಳ : ಇಲ್ಲಿನ ನಲ್ಕೆಮಾರ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಕಾರ್ಯಾಗಾರ ಮಂಗಳವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಚಿತ್ರಕಲೆಯ ಬಗ್ಗೆ ಮಾಹಿತಿ ನೀಡಿದರು. ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. 
ಮಕ್ಕಳಿಗೆ ಭಾರತದ ಚಿತ್ರ ಬಿಡಿಸುವುದು, ಅಕ್ಷರದಲ್ಲಿ ಚಿತ್ರ ಬಿಡಿಸುವುದು, ಪ್ರಾಣಿಗಳ ಚಿತ್ರ ರಚಿಸುವುದು ಹೀಗಿ ವಿವಿಧ ರೀತಿಯಲ್ಲಿ ಚಿತ್ರಕಲೆಯ ತರಬೇತಿ ನೀಡಲಾಯಿತು.
ಈ ಸಂದರ್ಭ ಮುಖ್ಯ ಶಿಕ್ಷಕಿ ಜ್ಯೋತಿ, ಸಹಶಿಕ್ಷಕಿಯರಾದ ಶಶಿಕಲಾ, ರೇಖಾ ರಾವ್, ಮೋಹಿನಿ, ಮಮತಾ, ಜಗನ್ನಾಥ್ , ಸೌಮ್ಯ, ಅಕ್ಷತಾ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.
