ಬಂಟ್ವಾಳ: ಗ್ರಾಮೀಣ ಅಭಿವೃದ್ದಿ ಜೊತೆಗೆ ಮುಂದಿನ ವರ್ಷ ನಡೆಯುವ ಕಂಬಳ ದಶಮಾನೋತ್ಸವಕ್ಕೆ ವಿಶೇಷ ನೆರವು ನೀಡುವುದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭರವಸೆ ನೀಡಿದ್ದಾರೆ.

ಇಲ್ಲಿನ ಉಳಿ ಗ್ರಾಮದ ಕಕ್ಯಪದವು ಮೈರ ಬರ್ಕೆಜಾಲು ಎಂಬಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಶನಿವಾರ ರಾತ್ರಿ ನಡೆದ 9 ನೇ ವರ್ಷದ ‘ಸತ್ಯ-ಧರ್ಮ’ ಜೋಡುಕರೆ ಬಯಲು ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ವೇಳೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಮಾಜಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಜಗನಾಥ ಬಂಗೇರ ನಿರ್ಮಲ್, ಉಳಿ ಪಂಚಾಯಿತಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಶ್ರೀಧರ ಅವರನ್ನು ಸನ್ಮಾನಿಸಲಾಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಜಯಂತ ಕೋಟ್ಯಾನ್ ಬೆಳ್ತಂಗಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಸಮಿತಿ ಮಾಜಿ ಅಧ್ಯಕ್ಷ ಹರಿಶ್ಚಂದ್ರ ಪೂಜಾರಿ ಕನಪಾಡಿಬೆಟ್ಟು,ಕಂಬಳ ಸಮಿತಿ ಜಿಲ್ಲಾಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್, ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರ, ಉಪಾಧ್ಯಕ್ಷ ಚಿದಾನಂದ ರೈ, ಭರತ್ ಶೆಟ್ಟಿ ಬೆಂಗಳೂರು, ಪ್ರಮುಖರಾದ ಸುಧಾಕರ ಶೆಟ್ಟಿ ಶಂಕರಬೆಟ್ಟು, ಕಂಬಳ ಸಮಿತಿ ಅಧ್ಯಕ್ಷ ಕುಸುಮಾಧರ ಉರ್ಕಿ,ಗೆಳೆಯರ ಬಳಗದ ಅಧ್ಯಕ್ಷ ಮಹೇಂದ್ರ ಕಾಯರ್‌ಗುರಿ, ತುಷಾರ್ ಆರ್.ಭಂಡಾರಿ, ಲತೀಶ್ ಕುಕ್ಕಾಜೆ ,ಧನಂಜಯ ಶೆಟ್ಟಿ ನಾಡಬೆಟ್ಟು, ಶಾಂತಪ್ಪ ಪೂಜಾರಿ ಹಟದಡ್ಕ, ಉಮೇಶ್ ಪೂಜಾರಿ, ಪ್ರಭಾಕರ ಪ್ರಭು, ಪುರುಷೋತ್ತಮ ಸಾಲಿಯಾನ್ ಶಂಭೂರು, ಯಶೋಧರ ಕರ್ಬೆಟ್ಡು, ಮಾಧವ ಮಾವೆ, ನಾರಾಯಣ ಪೂಜಾರಿ ಬೊಳ್ಳುಕಲ್ಲು, ಸರಪಾಡಿ ಅಶೋಕ ಶೆಟ್ಟಿ ಮತ್ತಿತರರು ಇದ್ದರು. ಶಿವಾನಂದ ಮೈರ ಸ್ವಾಗತಿಸಿದರು. ಪ್ರಶಾಂತ ಮೈರ ಕಾರ್ಯಕ್ರಮ ನಿರೂಪಿಸಿದರು.
