ಕೈಕಂಬ : ಗುರುಪುರ ಶ್ರೀ ವಜ್ರದೇಹಿ ಮಠ ಇದರ ‘ವಜ್ರದೇಹಿ ಜಾತ್ರೆ’ಯ ಪ್ರಥಮ ದಿನದ(ಜ. ೩) ಧಾರ್ಮಿಕ ಪೂಜಾ ಕಾರ್ಯಕ್ರಮವು ಶ್ರೀ ರಾಜಶೇಖರಾನಬಂದ ಸ್ವಾಮೀಜಿ ಉಪಸ್ಥಿತಿ ಹಾಗೂ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಅವರ ಆಧ್ವರ್ಯುತನದಲ್ಲಿ ಅದ್ದೂರಿಯಿಂದ ನಡೆಯಿತು.gur-jan-3-koorma saligrama

ಬೆಳಿಗ್ಗೆ ದ್ವಾದಶ ನಾರಿಕೇಳ ಮಹಾಗಣಯಾಗ, ನವಕ ಕಲಶಾಭಿಷೇಕ, ಕೂರ್ಮ ಮಹಾಸಾಲಿಗ್ರಾಮ ಮತ್ತು ಅನಂತ ಪದ್ಮನಾಭ ಮಹಾಸಾಲಿಗ್ರಾಮಕ್ಕೆ ಮಜಾಮಜ್ಜನ, ಸಾಮೂಹಿಕ ಆಶ್ಲೇಷಾ ಬಲಿ ಸೇವೆ ಮತ್ತು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.gur-jan-3-naga-2

ಅಪರಾಹ್ನ ೨ರಿಂದ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಪಾರ್ತಿಸುಬ್ಬ ವಿರಚಿತ `ಚೂಡಾಮಣಿ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ ೫ಕ್ಕೆ ಶ್ರೀ ದೇವರಿಗೆ ರಂಗಪೂಜೆ, ಶ್ರೀ ದೇವರ ಬಲಿ ಉತ್ಸವ, ಕಟ್ಟೆಪೂಜೆ, ಶ್ರೀ ದೇವರಿಗೆ ಶಯನ `ಕವಾಟ ಬಂಧನ’ ನಡೆಯಿತು. ಜ. ೪ರಂದು ಎರಡನೇ ದಿನದ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ರಾತ್ರಿ ೯ರಿಂದ ಮೈಸಂದಾಯ, ರಕ್ತೇಶ್ವರಿ ಮತ್ತು ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ಜರುಗಲಿದೆ.gur-jan-3-naga-1

By suddi9

Leave a Reply

Your email address will not be published. Required fields are marked *