ಜೀವ ಹಿಂಡುವ ಮೂಲವ್ಯಾಧಿಗೆ ‘ಸಾಲ್ಮರ ಆಯುರ್‌ಧಾಮ’ ಚೇತೋಹಾರಿ…
ಆಧುನಿಕ ಜಗತ್ತಿನಲ್ಲಿ ನಿರೋಗಿ ಯಾರೂ ಇಲ್ಲ ! ಆಬಾಲವೃದ್ಧರಿಗೆ ನಾನಾ ರೀತಿಯ ರೋಗ ತಪ್ಪಿದಲ್ಲ. ರೋಗ ಪರಿಹಾರಕ್ಕಾಗಿ ಹೆಜ್ಜೆಗೊಂದು ಚಿಕಿತ್ಸಾಲಯಗಳಿದ್ದರೂ, ಪುತ್ತೂರಿನ ಪಂಜಳದಲ್ಲಿರುವ *’ಸಾಲ್ಮರ ಆಯುರ್‌ಧಾಮ’ ಸರ್ವ ರೋಗಿಗಳಿಗೆ ಆಶಾಕಿರಣ ಕೇಂದ್ರವಾಗಿ ಜನಪ್ರಿಯಗೊಂಡಿದೆ ಎಂದರೆ ಅತಿಶಯೋಕ್ತಿಯಾಗದು. ಆಯುರ್ವೇದಕ್ಕೆ ಸಂವಾದಿಯಾಗಿರುವ ನಾಟಿ ವೈದ್ಯಕೀಯ ಪದ್ಧತಿಯ ಚಿಕಿತ್ಸಾಲಯವಾಗಿರುವ ಆಯುರ್‌ಧಾಮದ ನಾಟಿವೈದ್ಯ ಸಂಶುದ್ಧೀನ್ ಸಾಲ್ಮರ ಅವರು ಕಿಡ್ನಿ ಸ್ಟೋನ್ ಚಿಕಿತ್ಸೆಯಲ್ಲಿ ಎತ್ತಿದ ಕೈಯಾಗಿದ್ದರೂ, ಕ್ರಮೇಣ ಆಧುನಿಕ ಆಹಾರ ಪದ್ಧತಿಯಿಂದಾಗಿ ಹಲವರಿಗೆ ವೇದನೆಯಾಗಿ ಕಾಡುವ ಮೂಲವ್ಯಾಧಿಗೆ ಯಶಸ್ವಿ ಔಷಧೋಪಚಾರ ಆವಿಷ್ಕರಿಸಿದ್ದಾರೆ. ತಂದೆ ದಿವಂಗತ ಪಿ. ಎಸ್ ಅಹ್ಮದ್ ಮತ್ತು ತಾಯಿ ಐಸಮ್ಮ ಅವರಿಂದ ನಾಟಿ ವೈದ್ಯಪದ್ಧತಿ ಬಳುವಳಿಯಾಗಿ ಪಡೆದುಕೊಂಡಿರುವ ಸಂಶುದ್ಧಿನ್, ಪುತ್ತೂರಿನಲ್ಲಿ ಕಾಲೇಜು ಶಿಕ್ಷಣ ಪಡೆದ ಬಳಿಕ ನಾಟಿ ವೈದ್ಯಕೀಯ ವೃತ್ತಿ ಮೇಲೆ ಆಸಕ್ತಿ ವಹಿಸಿದರು. ಮುಂದೆ ಇವರಿಗೆ ಇದೇ ವೃತ್ತಿಜೀವನವಾಯಿತು, ಸಾವಿರಾರು ಮಂದಿಗೆ ಇವರೇ ‘ವೈದ್ಯೋ ನಾರಾಯಣೋ ಹರಿ’ಯಂತಾದರು !
*ಕೆಲವು ವರ್ಷ ಮುಂಬೈಯಲ್ಲಿ ಕಿಡ್ನಿ ಸ್ಟೋನ್‌ಗೆ ಪರಿಣಾಮಕಾರಿ ಚಿಕಿತ್ಸೆ ಮುಂದುವರಿಸಿದ್ದ ಇವರು, ಮುಂದೆ ಮಹಾರಾಷ್ಟ್ರದ ಮುರುಡ್, ಜಂಜೀರ್, ರಾಯಘಡ, ರತ್ನಾಗಿರಿ, ಪುಣೆಯಲ್ಲಿ ಕಿಡ್ನಿ ಸ್ಟೋನ್ ಮತ್ತು ಮೂಲವ್ಯಾಧಿ ಸಹಿತ ಪಿಸ್ತುಲಾ, ಪಾರ್ಶ್ವವಾಯು, ಸಂಧಿವಾತ, ಬಿಳಿಸೆರಗು, ಕಾಮಾಲೆ(ಜಾಂಡೀಸ್), ಮುಟ್ಟುದೋಷ, ದೀರ್ಘ ಕಾಲದ ಬೇನೆ, ಅಲರ್ಜಿ, ಅಸ್ತಮಾ, ಗ್ಯಾಸ್ಟ್ರಿಕ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಮಂಡಿ ನೋವು, ಅಕಾಲಿಕ ಕೂದಲು ಉದುರುವಿಕೆ ಮತ್ತಿತರ ಜೀವ ಹಿಂಡುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಸಾಕಷ್ಟು ಜನಮನ್ನಣೆ ಗಳಿಸಿದ್ದಾರೆ.
*ಇತ್ತೀಚಿನ ಕೆಲವು ವರ್ಷಗಳಿಂದ ಮತ್ತೆ ಹುಟ್ಟೂರು ಪುತ್ತೂರಿನ ಸಾಲ್ಮರ ಸೇರಿರುವ ಸಂಶುದ್ದೀನ್ ಅವರು ದಕ್ಷಿಣ ಕನ್ನಡ ಜಿಲ್ಲೆ, ನೆರೆಯ ಜಿಲ್ಲೆ ರಾಜ್ಯಗಳಲ್ಲಿ ಮೂಲವ್ಯಾಧಿಗೆ ದುಬಾರಿಯಲ್ಲದ ಹಾಗೂ ಪರಿಣಾಮಕಾರಿ ಮದ್ದು ನೀಡಿ, ವಿವಿಧ ವ್ಯಾಧಿಗಳಿಂದ ಬಳಲುತ್ತಿದ್ದ ಮಂದಿ ರೋಗರಹಿತ ಜೀವನ ಸಾಗಿಸುವಂತೆ ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜನರ ಬಹು ಬೇಡಿಕೆಯಂತೆ ಮತ್ತೊಂದು ಬಾರಿ ಮಹಾರಾಷ್ಟ್ರದತ್ತ ಮುಖ ಮಾಡಿರುವ ಇವರು, ವಿದೇಶಕ್ಕೂ ತನ್ನ ನಾಟಿ ವೈದ್ಯ ಪದ್ಧತಿಯ ಬಾಹುಳ್ಯ ವಿಸ್ತರಿಸಿಕೊಂಡಿದ್ದಾರೆ.
*ಮೂಲವ್ಯಾಧಿ :
ಆಬಾಲವೃದ್ಧರನ್ನು ಕಾಡುವ ಸಮಸ್ಯೆ ಮೂಲವ್ಯಾಧಿ. ಹಿಂದೆ ವಯಸ್ಕರಲ್ಲಿ ಕಂಡು ಬರುತ್ತಿದ್ದ ಈ ರೋಗ, ಈಗ ಎಲ್ಲ ವಯೋಮಾನದವರಲ್ಲೂ ಕಂಡು ಬರುತ್ತಿದೆ. ಬಹುತೇಕ ಮಂದಿ ಮೂಲವ್ಯಾಧಿಗೆ ಔಷಧಿ ಪಡೆಯಲು ಹಿಂಜರಿಯುತ್ತಾರೆ ಅಥವಾ ನಾಚಿಕೆಪಟ್ಟುಕೊಳ್ಳುತ್ತಾರೆ. ಇದಕ್ಕೆ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಸಿಕ್ಕಿದರೆ ಮುಂದೆ ಜೀವನಪರ್ಯಂತ ಮೂಲವ್ಯಾಧಿ ಬಾಧಿಸದು. ಮೂಲವ್ಯಾಧಿ ನಿವಾರಣೆಗೆ ಸರ್ಜರಿ ಮದ್ದಲ್ಲ. ಸರ್ಜರಿ ಮಾಡಿಸಿಕೊಂಡವರಲ್ಲಿ ಮತ್ತೆ ರೋಗ ಕಾಣಿಸಿಕೊಳ್ಳಬಹುದು ಅಥವಾ ರೋಗ ಉಲ್ಭಣಸಬಹುದು. ನಾಟಿ ವೈದ್ಯ ಪದ್ಧತಿಯಲ್ಲಿ ಇದಕ್ಕೆ ಶಾಶ್ವತ ಪರಿಹಾರವಿದೆ. ನಿಧಾನಗತಿಯಲ್ಲಿ ಗುಣಮುಖವಾಗುವ ಈ ಕಾಯಿಲೆ ಮತ್ತೆಂದೂ ನಿಮ್ಮನ್ನು ಕಾಡದು. ಇದು ನಾಟಿ ಮದ್ದಿಗಿರುವ ಶಕ್ತಿ ಎಂದು ಸಂಶುದ್ಧಿನ್ ಸಾಲ್ಮರ ಹೇಳುತ್ತಾರೆ.
ಪರಿಣಾಮಕಾರಿ ಔಷಧೋಪಚಾರ :
*ಸಾಲ್ಮರ ಆಯುರ್‌ಧಾಮಕ್ಕೆ ಭೇಟಿ ನೀಡುವ ಶ್ರೀಮಂತರು ಮತ್ತು ಬಡಬಗ್ಗರಿಗೆ ಏಕರೀತಿಯ ಚಿಕಿತ್ಸೆ ಲಭ್ಯವಿದೆ. ಮೂಲವ್ಯಾಧಿ, ಕಿಡ್ನಿ ಸ್ಟೋನ್ ಅಥವಾ ಇನ್ನಿತರ ಜಟಿಲ ಕಾಯಿಲೆಗಳ ಪರಿಹಾರಕ್ಕಾಗಿ ಬೇರೆಡೆ ಲಕ್ಷಾಂತರ ರೂ ಕರ್ಚು ಮಾಡಿ ಕೈಸುಟ್ಟುಕೊಂಡವರಿಗೆ ಇಲ್ಲಿ ಕೈಗೆಟಕುವ ಮೊತ್ತಕ್ಕೆ ಚಿಕಿತ್ಸೆ ಲಭ್ಯವಿದೆ. ಅಲ್ಲದೆ, ಶೀಘ್ರ ರೋಗ ಗುಣಮುಖವಾಗಿ ಸಲೀಸಾದ ಜೀವನ ಸಾಗಿಸಬಹುದು. ಔಷಧಿ ಪಡೆದುಕೊಳ್ಳುವ ಅವಧಿಯಲ್ಲಿ ಮಾತ್ರ ಕೆಲವೊಂದು ಪಥ್ಯ ನಿರ್ದೇಶಿಸಲಾಗುತ್ತದೆ. ಬಳಿಕ ಯಾವುದೇ ರೀತಿಯ ಪಥ್ಯ ಅಗತ್ಯವಿಲ್ಲ, ಸಾಮಾನ್ಯ ಆಹಾರ-ವಿಹಾರ ನಿಮ್ಮದಾಗಿಸಿಕೊಳ್ಳಬಹುದು. ಆದರೆ ಆಹಾರ ಪದ್ಧತಿ, ಜೀವನ ಶೈಲಿ ಮೇಲೆ ಕಾಳಜಿ ನಮ್ಮೆಲ್ಲರ ಆದ್ಯ ಕರ್ತವ್ಯ. ದೇಶ-ವಿದೇಶಗಳಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಸಾವಿರಾರು ಮಂದಿ ಸಾಲ್ಮರ ಆಯುರ್‌ಧಾಮದ ಚಿಕಿತ್ಸಾ ವೈಖರಿ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ಈವರೆಗೆ ಈ ಕೇಂದ್ರದಿಂದ ಯಾರಿಗೂ ನಿರಾಸೆಯಾಗಿಲ್ಲ ಎಂದು ಸಂಶುದ್ದೀನ್ ಸಾಲ್ಮರ ಹೇಳುತ್ತಾರೆ.
*ಕಿಡ್ನಿ ಸ್ಟೋನ್, ಮೂಲವ್ಯಾಧಿ ಎಂದು ಹೇಳಿಕೊಂಡು ಕಂಡಕಂಡವರಿಂದ ಚಿಕಿತ್ಸೆ ಪಡೆಯುವುದರಿಂದ ಏನೂ ಪ್ರಯೋಜನವಾಗದು. ಜೀವ ಹಿಂಡುವ ಕಾಯಿಲೆಗಳಿಗೆ ಕೆಲವು ವರ್ಷದಿಂದ ಬೇರೆಡೆ ಚಿಕಿತ್ಸೆ ಮುಂದುವರಿಸಿ, ರೋಗ ಗುಣಮುಖವಾಗದೆ ನಿರಾಶೆ ಹೊಂದಿರುವ ಮಂದಿಗೆ ಸಾಲ್ಮರ ಆಯುರ್‌ಧಾಮದಲ್ಲಿ ಕೇವಲ 21 ದಿನದಲ್ಲಿ ಶಾಸ್ವತ ಪರಿಹಾರ ಸಿಗಲಿದೆ. ವರ್ಷಗಳಿಂದ ಕಾಡುವ ಮೂಲವ್ಯಾಧಿಯಾಗಿದ್ದರೆ 40ರಿಂದ 60ದಿನಗಳ ಚಿಕಿತ್ಸೆ ಪಡೆದುಕೊಳ್ಳಬೇಕು. ಮೂಲವ್ಯಾಧಿಗೆ ಫೈಲೋ ಕ್ಯೂರ್ ಲೇಹ ರಾಮಬಾಣವಾಗಿದೆ.
*ಸಾಲ್ಮರ ಆಯುರ್‌ಧಾಮದ ಚಿಕಿತ್ಸಾ ವಿಶೇಷತೆ, ಚಿಕಿತ್ಸಾ ವಿಧಾನ, ಔಷಧೋಪಚಾರ, ಚಿಕಿತ್ಸೆಯ ಪರಿಣಾಮ ಮತ್ತಿತರ ವಿಷಯಗಳ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳಬೇಕೆನಿಸಿದ ಮಂದಿ www.salmaraherbal.com ಸೈಟ್ ಗಮನಿಸಬಹುದು. ಸಮಸ್ಯೆ ಇದ್ದವರು ಈ ಸೈಟ್‌ಗೆ ಬರೆದುಕೊಂಡು ಪರಿಹಾರ ಕಂಡುಕೊಳ್ಳಲು ಅವಕಾಶವಿದೆ.
*ನಮ್ಮಲ್ಲಿ ನಿಮ್ಮ ಭೇಟಿ :
*ಪ್ರತಿ ತಿಂಗಳ 5-10ವರೆಗೆ ಮುಂಬೈ,12-15ರವರೆಗೆ ಮಹಾರಾಷ್ಟ್ರದ ಮುರುಡ್, ಜಂಜೀರ್, 16-18ರವರೆಗೆ ರತ್ನಾಗಿರಿ, 20-25ರವರೆಗೆ ಪುತ್ತೂರಿನ ಸಾಲ್ಮರ ಆಯುರ್‌ಧಾಮ ಹಾಗೂ 26-03ರವರೆಗೆ ಗಲ್ಫ್ ರಾಷ್ಟ್ರವಾದ ದುಬೈಯಲ್ಲಿ ಖುದ್ದಾಗಿ ಸಂಶುದ್ಧಿನ್ ಸಾಲ್ಮರ ಲಭ್ಯವಿದ್ದಾರೆ. ರೋಗ ಸಮಸ್ಯೆಯಲ್ಲಿರುವ ಮಂದಿ, ನಿಗದಿತ ಸ್ಥಳದಲ್ಲಿ ಚಿಕಿತ್ಸೆ ಪಡೆಯಲೋಸುವ ಮುಂಗಡ ಸಮಯ ಕಾಯ್ದುಕೊಳ್ಳುವುದು ಉಚಿತ. ಹೆಚ್ಚಿನ ಮಾಹಿತಿಗಾಗಿ :- ನಾಟಿವೈದ್ಯ ಸಂಶುದ್ಧಿನ್ ಸಾಲ್ಮರ, ಪಂಜಳ ಜಂಕ್ಷನ್, ಸಾಂದೀಪನಿ ಸ್ಕೂಲ್ ರಸ್ತೆ, ಪುತ್ತೂರು, ದಕ್ಷಿಣ ಕನ್ನಡ. ಮೊಬೈಲ್ :9353436373/948399100 0 ಸಂಖ್ಯೆ ಸಂಪರ್ಕಿಸಬಹುದು.
✒️ಧನಂಜಯ ಗುರುಪುರ