ಬಂಟ್ವಾಳ : ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ೧೦೪ನೇ ಜನ್ಮ ದಿನವನ್ನು ದೀಪ ಬೆಳಗಿಸುವ ಮುಖಾಂತರ ಪುಷ್ಪನಮನ ಸಲ್ಲಿಸಲಾಯಿತು.01

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ ಜಗತ್ತು ಕಂಡಂತಹ ಒಬ್ಬ ಧೈರ್ಯಶಾಲಿ ಹಾಗೂ ಬಡವರ ಕಣ್ಣೀರನ್ನು ಒರಸಿದ ಮತ್ತು ಬ್ಯಾಂಕ್ ರಾಷ್ಟ್ರೀಕರಣ, ಉಳುವವನೆ ಭೂಮಿಯ ಒಡೆಯ ಹಾಗೂ ದೇಶದಲ್ಲಿ ಪರಿಣಮಕಾರಿಯಾಗಿ ೨೦ಅಂಶ ಕಾರ್ಯಕ್ರಮವನ್ನು ಜಾರಿಗೊಳಿಸಿದ ಶ್ರೇಷ್ಠ ನಾಯಕಿ ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಚಂದಪ್ರಕಾಶ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಸದಸ್ಯರಾದ ಜನಾರ್ಧನ ಚಂಡ್ತಿಮಾರ್, ಗಂಗಾಧರ್ ಪೂಜಾರಿ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬಾಸ್ ಆಲಿ, ಬಂಟ್ವಾಳ ಕ್ರೆಡಿಟ್ ಕೋ ಅಪರೇಟಿವ್ ನಿರ್ದೇಶಕರಾದ ನಾರಾಯಣ್ ನಾಯ್ಕ, ಅಮ್ಮು ಅರ್ಬಿಗುಡ್ಡೆ, ಮುಖಂಡರಾದ ಸಿಬ್ಲಿಕ್ ಸರಾವ್, ರಾಜೇಶ್ ಶೆಟ್ಟಿ ಕಾರಿಂಜ, ಬಶೀರ್ ಟಿಪ್ಪುನಗರ, ಅರ್ಷಾದ್ ಸರಾವ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *