ಕೈಕಂಬ: ಗುರುಪುರ ಕೈಕಂಬದ ಪೊಳಲಿ ದ್ವಾರದ ಹತ್ತಿರ ವಿವೇಕಾನಂದ ಸರ್ಕಲ್ , ಪ್ರ ಯಣಿಕರಿಗೆ ಸುಸಜ್ಜಿತವಾದ ಬಸ್ಸು ತಂಗುದಾಣ ನಿರ್ಮಿಸಿ ಬಿಸಿರೋಡ್ ರಸ್ತೆಗೆ ವಿವೇಕಾನಂದ ಹೆಸರಿನ ನಾಮಪಲಕ ವನ್ನು ಇತ್ತಿಚೇಗೆ ಅನಾವರಣಗೊಂಡಿತು. ಕೈಕಂಬ ಪೊಳಲಿ ದ್ವಾರದ ಸರ್ಕಲ್ ನಿಂದ ಸುಮಾರು 18 ಕಿ.ಮೀ ರಸ್ತೆಗೆ ಬಿಸಿ ರೋಡ್ ಕೈಕಂಬ ದ್ವಾರದವರೆಗೆ ವಿವೇಕನಂದ ಹೆಸರು ತೋರಿಸುವ ಒಟ್ಟು 16 ದಿಕ್ಸೂಚಿ ಕಂಬಗಳನ್ನು ಅಲ್ಲಲ್ಲಿ ರಸ್ತೆಯ ಬದಿಯಲ್ಲಿ ಅಳವಡಿಸಲಾಗಿದ್ದು ಈ ಪೈಕಿ ಗುರುಪುರ ಗ್ರಾಮ ಪಂಚಾಯತ್ ಗೊಳಪಟ್ಟ ಅಡ್ಡೂರು ಪರಿಸರದಲ್ಲಿ ಹಾಕಲಾದ ದಿಕ್ಸೂಚಿ ಕಂಬಗಳನ್ನು ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆಯ ವಿವರ: ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತನ್ಯಾನಂದ ಸ್ವಾಮಿಜಿಗಳು ಕೆಲವು ತಿಂಗಳ ಹಿಂದೆ ಕೈಕಂಬದ ಪೊಳಲಿ ದ್ವಾರದ ಸಮೀಪದಲ್ಲಿ `ವಿವೇಕಾನಂದ ಸರ್ಕಲ್’, ವಿವೇಕನಂದ ಬಸ್ಸು ತಂಗುದಾಣ, ವಿವೇಕಾನಂದರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ಆ ರಸ್ತೆಗೆ ವಿವೇಕಾಂದ ರಸ್ತೆ ಎಂಬ ಹೆಸರನ್ನು ಅಧಿಕೃತವಾಗಿ ನಾಮನಿರ್ದೇಶನಗೊಳಿಸಲಾಗಿ ಉಸ್ತುವರಿ ಸಚಿವರಾದ ರಮಾನಾಥ ರೈ ಅವರು ಉದ್ಘಾಟನೆ ಮಾಡಿ ಅಧಿಕೃತವಾಗಿ ನಾಮನಿರ್ದೇಶನಗೊಳಿಸಲಾಗಿತ್ತು

ವಿವೇಕಚೈತನ್ಯಾನಂದ ಸ್ವಾಮೀಜಿಯವರು ಪೊಳಲಿ ದ್ವಾರದಿಂದ ಬಿ.ಸಿ.ರೋಡ್ಗೆ ಸಂಪರ್ಕ ಕಲ್ಪಿಸುವ ವಿವೇಕಾನಂದ ರಸ್ತೆಯಲ್ಲಿ `ಸಾಮಿ ವಿವೇಕಾನಂದ ರಸ್ತೆ’ ಎಂಬ ಹೆಸರಿನ ದಿಕ್ಸೂಚಿ ಕಂಬಗಳನ್ನು ಒಟ್ಟು 16 ಕಡೆ ಇರಿಸಿದ್ದರು.
ಆದರೆ ಕಳೆದರಡು ದಿನಗಳ ಹಿಂದೆ ಅಡ್ಡೂರು ಪ್ರದೇಶದಲ್ಲಿ ಹಾಕಲಾಗಿದ್ದ ದಿಕ್ಸೂಚಿ ಕಂಬಗಳನ್ನು ಯಾರೋ ಅಪರಿಚಿತ ದುಷ್ಕರ್ಮಿಗಳು ಕಿತ್ತೆಸೆದಿದ್ದಾರೆ. ಈ ಬಗ್ಗೆ ಸ್ವಾಮಿಜಿಯವರು ಬಜ್ಪೆ ಠಾಣೆಯಲ್ಲಿ ತಿಳಿಸಿ ಆ ನಂತರ ಈ ಕಂಬಗಳನ್ನು ಅದೇ ಜಾಗದಲ್ಲಿ ಹಾಕಲಾಯಿತಾದರೂ ಕಿಡಿಗೇಡಿಗಳು ಅದನ್ನು ಮತ್ತೆ ಕಿತ್ತೆಸೆದಿದ್ದಾರೆ.
ಈಬಗ್ಗೆ ಬಜ್ಪೆ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿವೇಕ ಚೈತನ್ಯಾನಂದ ಅವರು ಈ ಘಟನೆಯಿಂದ ತನಗೆ ಬಹಳ ನೋವಾಗಿರುವುದಾಗಿ ಬೇಸರ ವ್ಯಕ್ತ ಪಡಿಸಿ ದ್ದಾರೆ.
