ವಿಟ್ಲ: ವೀರ ಪರಂಪರೆಯ ಭಾರತೀಯ ಪುಣ್ಯ ಭೂಮಿಯಲ್ಲಿ ಜನಿಸಿದ ಭಾರತೀಯ ಸೇನೆಯಲ್ಲಿ ೨೦೦೧-೨೦೨೧ರವರವರೆಗೆ ಕಾಶ್ಮೀರ, ಅಸ್ಸಾಂ, ನಾಗಲ್ಯಾಂಡ್, ದೆಹಲಿ, ಉತ್ತರ ಪ್ರದೇಶ ಹೀಗೆ ೨೦ ವರ್ಷಗಳ ಕಾಲ ಜೀವದ ಹಂಗು ತೊರೆದು ತಾಯ್ನಾಡಿನ ರಕ್ಷಣೆಗಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಹುಟ್ಟುರಿಗೆ ಆಗಮಿಸಿದ ವೀರ ಯೋಧ ದಯಾನಂದ ನೆತ್ರೆಕೆರೆ ವಿಟ್ಲ ಇವರ ನಿವಾಸಕ್ಕೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಶಾಲು ಹೊದಿಸಿ ಅಭಿನಂದಿಸಿದರು.

7cd03cea-c042-43d9-82bc-68039b7e96de 2ef4740b-fc32-45c8-aad9-2fca80c03281
ಈ ಸಂದರ್ಭದಲ್ಲಿ ವಿಟ್ಲಪಡ್ನೂರು ವಲಯ ಅಧ್ಯಕ್ಷರಾದ ಶ್ರೀ ಬಿ ಸಂದೇಶ್ ಶೆಟ್ಟಿ, ಲಯನ್ಸ್ ಪ್ರಾಂತೀಯ ಸಲಹೆಗಾರರಾದ ಸುದರ್ಶನ್ ಪಡಿಯಾರ್, ಸಿದ್ದಿಕ್ ಸರಾವ್, ಸಿರಾಜ್ ಮಾದಕ,ಎಂಎಸ್ ಮಹಮ್ಮದ್, ಜಾಫರ್ ಖಾನ್, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸದಸ್ಯರುಗಳು, ಹಾಗೂ ಸೈಂಟ್ ರೀಟ ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *