ಕೈಕಂಬ : ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ. ಅವರು ಬುಧವಾರ ಎಂ.ಆರ್.ಪಿ.ಎಲ್. ನ ಸಿಎಸ್ಆರ್ ಅನುದಾನ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕುಪ್ಪೆಪದವು ಕಿಲೆಂಜಾರು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.20211027_161352

ಶಿಕ್ಷಣ ವ್ಯವಹರಿಕವಾದ ನಂತರದಲ್ಲಿ ಮೌಲ್ಯಗಳು ಬೆಲೆ ಕಳೆದುಕೊಂಡಿವೆ ಗುರುಗಳನ್ನು ಗೌರವಿಸುವ ಮನೋಭಾವ ಕಡಿಮೆಯಾಗಿದೆ ಎಂದ ಅವರು ಅಂಗನವಾಡಿಯಿಂದ ಪದವಿವರೆಗೆ ಅನ್ವಯವಾಗುವ  ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿ ಆಸಕ್ತಿಗನುಗುಣವಾಗಿ ಬಹು ಆಯ್ಕೆ ಮತ್ತು ಬದಲಾವಣೆ ಮಾಡುವ ಅವಕಾಶ ಸಿಗಲಿದ್ದು ಶಿಕ್ಷಕರ ಅಗತ್ಯ ಸೌಲಭಗಳ  ಬಗ್ಗೆಯೂ ಬದಲಾವಣೆ ಆಗಲಿದೆ ಎಂದರು.
20211027_161407

ಕುಪ್ಪೆಪದವು ಪಂಚಾಯತ್ ಅಧ್ಯಕ್ಷ ಡಿ.ಪಿ. ಹಮ್ಮಬ್ಬ, ಪಿಡಿಓ ಸವಿತಾ ಮಂದೋಲಿಕರ, ನಿವೃತ್ತ ಮುಖ್ಯೋಪಾಧ್ಯಾಯ ಅಣ್ಣಯ್ಯ ಎಂ., ಪಂಚಾಯತ್ ಸದಸ್ಯರುಗಳು,ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಅನಂತರಾಮ ರಾವ್ ಸ್ವಾಗತಿಸಿದರು, ಶಿಕ್ಷಕಿ ಮಧುಮಾಲತಿ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *