ಬಂಟ್ವಾಳ: ತಾಲ್ಲೂಕಿನ ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಶ್ರೀ ರಾಮ ಮಂದಿರದ ಸುವರ್ಣ ಮಹೋತ್ಸವ ಸಂಭ್ರಮ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ನಡೆಯಿತು.
ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಶ್ರೀ ರಾಮ ಮಂದಿರದ ಸುವರ್ಣ ಮಹೋತ್ಸವ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ನಡೆಯಿತು.
ಮಂದಿರದ ಗೌರವಾಧ್ಯಕ್ಷ, ಉದ್ಯಮಿ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಶಶಿಧರ್ ಬ್ರಹ್ಮರಕೂಟ್ಲು ಶುಭ ಹಾರೈಸಿದರು. ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ರೆಂಜೋಡಿ, ಪ್ರಮುಖರಾದ ಜ್ಯೋತೀಂದ್ರ ಪ್ರಸಾದ್ ಶೆಟ್ಟಿ ಮುಂಡಾಜೆಗುತ್ತು, ಸದಾಶಿವ ಡಿ. ತುಂಬೆ, ದೇವಂದಬೆಟ್ಟು ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ತುಂಬೆ, ಅನಿಲ್ ಪಂಡಿತ್, ಗೋಪಾಲ್ ಕುಲಾಲ್ ಗೋವಿಂತೋಟ, ಸಮಿತಿ ಅಧ್ಯಕ್ಷ ರೋಷನ್ ರೈ ಪಚ್ಚಿನಡ್ಕ, ನವೀನ್ ಪಲ್ಲ ಮತ್ತಿತರರು ಇದ್ದರು.
