ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಶನಿವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಾತ್ವಿಕಾ ಬಾಳ್ತಿಲ ಇವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಕೆ.ಎ.ಸತೀಶ್ಚಂದ್ರ ಮತ್ತಿತರರು ಇದ್ದರು.23btl-Jenuಕಳೆದ ೧೯ ವರ್ಷಗಳ ಹಿಂದೆ ಬಿ.ಸಿ.ರೋಡಿನಲ್ಲಿ ಆರಂಭಗೊಂಡ ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ಒಟ್ಟು ಒಟ್ಟು ರೂ ೨೮.೫ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ ೧೮.೮೩ ಲಕ್ಷ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ ೧೧ ರಷ್ಟು ಡಿವಿಡೆಂಡ್ ಘೋಷಿಸಿದೆ ಎಂದು ಸಮಘದ ಅಧ್ಯಕ್ಷ ಕೆ.ಎ.ಸತೀಶ್ಚಂದ್ರ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡಿನಲ್ಲಿ ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಶನಿವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು ಪಾಂಡವರಕಲ್ಲು ಮತ್ತು ಮಡಂತ್ಯಾರು ಎಂಬಲ್ಲಿ ಗಣಕೀಕೃತ ಶಾಖೆ ಹೊಂದಿದ್ದು, ಸದಸ್ಯರಿಗೆ ತ್ವರಿತ ಸಾಲ ನೀಡುತ್ತಿದೆ. ಜೇನು ಮತ್ತು ರಬ್ಬರ್ ಶೀಟ್ ಖರೀದಿ ಜೊತೆಗೆ ಪಾಂಡವರಕಲ್ಲು ಶಾಖೆಗೆ ಸ್ವಂತ ನಿವೇಶನ ಮತ್ತು ಸುಸಜ್ಜಿತ ಕಟ್ಟಡ ನಿರ್ಮಿಸಲು ಮುಂದಾಗಿದೆ ಎಂದರು. ಸಂಘದ ಸಿಇಒ ಗುಣಶೇಖರ ಕೆ. ಲೆಕ್ಕಪತ್ರ ಮಂಡಿಸಿದರು.

ಇದೇ ವೇಳೆ ಜೇನು ಕೃಷಿಕ ಈಶ್ವರ ಭಟ್, ರಬ್ಬರ್ ಕೃಷಿಕ ರವಿ ಸುವರ್ಣ, ಪ್ರತಿಭಾನ್ವಿತ ವಿದ್ಯಾರ್ಥಿನಿ ಸಾತ್ವಿಕಾ ಬಾಳ್ತಿಲ ಇವರಿಗೆ ಸನ್ಮಾನ, ಬಡ ಕುಟುಂಬದ ಲಕ್ಷ್ಮಿ ಇವರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ಮೋಹನ್ ಪಿ.ಎಸ್., ನಿರ್ದೇಶಕರಾದ ರಾಘವ ಪೂಜಾರಿ, ಬಿ.ಪದ್ಮಶೇಖರ ಜೈನ್, ತಿಮ್ಮಪ್ಪ ಪೂಜಾರಿ, ರಾಜೇಂದ್ರ ಹಾರ್ದೊಟ್ಟು, ಈಶ್ವರ ಭಟ್, ಈಶ್ವರ ಬಾಳ್ತಿಲ, ಉಮ್ಮರ್ ಮಂಚಿ, ಅರವಿಂದ ಭಟ್, ವಸಂತ ಬಡಗಕಜೆಕಾರು, ರಾಮಚಂದ್ರ ಪೂಜಾರಿ, ಎ.ಕೆ.ಹ್ಯಾರಿಸ್, ರಾಜಶೇಖರ ಶೆಟ್ಟಿ, ಕಾಂಚಲಾಕ್ಷಿ ಇದ್ದರು.

By suddi9

Leave a Reply

Your email address will not be published. Required fields are marked *