ಬಂಟ್ವಾಳ : ತಾಲೂಕು ಅಮ್ಟಾಡಿ ಗ್ರಾಮದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದಾಗಿದೆ. ಇದನ್ನು ಬಂಟ್ವಾಳ ಕ್ಷೇತ್ರ ಮಹಿಳಾ ಮೋರ್ಚಾ ತ್ರೀವವಾಗಿ ಖಂಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಈ ರೀತಿಯ ಪ್ರಕರಣಗಳು ಕಂಡುಬರುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ.IMG-20211011-WA0026ಪೋಲಿಸ್ ಇಲಾಖೆ ಈ ನಿಟ್ಟಿನಲ್ಲಿ ಅಫರಾಧಿಗಳನ್ನು ತ್ವರಿತಗತಿಯಲ್ಲಿ ಪತ್ತೆ ಮಾಡಿ ಪೋಕ್ಸೊ ಕಾಯಿದೆಯಲ್ಲಿ ತಪ್ಪಿತಸ್ಥರನ್ನು ಶಿಕ್ಷಗೆ ಒಳಪಡಿಸುವ ಕಾರ್ಯವು ನಡೆಯುತ್ತಿರುವುದು ಸಮಾಧಾನಕರ ವಿಷಯವಾಗಿದೆ. ಅಮ್ಟಾಡಿ ಗ್ರಾಮ ವ್ಯಾಪ್ತಿಯ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಟ್ವಾಳ ಶಾಸಕರ ಮುರ್ತುವರ್ಜಿಯೊಂದಿಗೆ ಪೋಲಿಸ್ ಇಲಾಖೆ ಕ್ಷಿಪ್ರಗತಿಯಲ್ಲಿ ತಪ್ಪಿತಸ್ಥರನ್ನು ಬಂಧಿಸಿರುವುದು ಅತ್ಯಂತ ಶ್ಲಾಘನೀಯ.

ಕಠಿಣ ಕ್ರಮದ ಮೂಲಕ ತಪ್ಪಿಸ್ಥರನ್ನು ನಿದ್ರಾಕ್ಷಿಣ್ಯವಾಗಿ ಶಿಕ್ಷೆಗೊಳಪಡಿಸಬೇಕಾಗಿ ಪೋಲಿಸ್ ಉನ್ನತ ಅಧಿಕಾರಿಗಳಲ್ಲಿ ಬಂಟ್ವಾಳ ಕ್ಷೇತ್ರ ಮಹಿಳಾ ಮೋರ್ಚಾ ಮನವಿ ಸಲಿಸಿದ್ದು ಈ ಸಂಧರ್ಭದಲ್ಲಿ ಸುಲೋಚನ ಭಟ್ ರಾಜ್ಯ ನಿರ್ದೇಶಕರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಮಲಾಕ್ಷಿ ಪೂಜಾರಿ ಮಾಜಿ ಜಿ.ಪಂ ಸದಸ್ಯರು, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಚೌಟ, ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಸೀಮಾ ಮಾಧವ,ಕ್ಷೇತ್ರ ಉಪಾಧ್ಯಕ್ಷರಾದ ರೋನಾಲ್ಡ್ ಡಿಸೋಜ, ಅಮ್ಟಾಡಿ ಪಂಚಾಯತ್ ಅಧ್ಯಕ್ಷೆ ಮೋಹಿನಿ, ಅಮ್ಟಾಡಿ ಪಂ.ಸದಸ್ಯರಾದ ವಿಜಯ ರೂಪೇಶ್, ಪಿಲಾತಬೆಟ್ಟು ಪಂ. ಅಧ್ಯಕ್ಷೆ ಹರ್ಷಿಣಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *