ಕೈಕಂಬ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತಿಯ ಅ.೧೦ ರಂದು ಲಲಿತಾಪಂಚಮಿಯAದು ಅಮ್ಮನವರಿಗೆ ಹರಕೆಯ ರೂಪದಲ್ಲಿ ಬಂದ ಸೀರೆಗಳನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು. 245160047_2669482033360588_7608558626185211936_n

10vp seereಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಥಮ ಭಾರಿಗೆ ಸೀರೆಗಳನ್ನು ಭಕ್ತಾಧಿಗಳಿಗೆ ನೀಡಲಾಯಿತು. ಬೆಳಗ್ಗೆ ಕ್ಷೇತ್ರದ ಅರ್ಚಕರು ತಂತ್ರಿವರ್ಗದವರು, ಆಡಳಿತ ಮುಕ್ತೇಸರರು, ಸುಬ್ರಹ್ಮಣ್ಯ ತಂತ್ರಿ, ಕೋಡಿಮಜಲು ಉಪಾಧ್ಯಾಯ, ಪವಿತ್ರಪಾಣಿ ಮಾಧವ ಭಟ್,ಅರ್ಚಕರಾದ ನಾರಾಯಣ್ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್,ಮಾಧವ ಮಯ್ಯ, ವಿಷ್ಣುಮೂರ್ತಿ ನಟ್ಟೋಜ ಮುಂತಾದವರು ದೇವರಲ್ಲಿ ಪ್ರಾರ್ಥಿಸಿದರು.

245162005_2669481503360641_8901084840009595452_nಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ದೇವಳದ ಆಡಳಿತ ಮುಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮುಂಜೆ ಗುತ್ತು, ಅನುವಂಶಿಕ ಮುಕ್ತೇಸರರಾದ ಯು.ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ ಪೊಳಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮು ಮತ್ತಿತರರು ಉಪಸ್ಥಿತರಿದ್ದರು. ಸಾವಿರಾರು ಭಕ್ತಾಧಿಗಳು ಪ್ರಸಾದ ರೂಪವಾಗಿ ಸೀರೆಯನ್ನು ಸ್ವೀಕರಿಸಿದರು. ದೇವಳದಲ್ಲಿ ದಿನಪ್ರತಿ ಭಕ್ತಾಧಿಗಳಿಂಧ ಚಂಡಿಕಾಯಾಗ ನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *