ಮೂಡುಬಿದಿರೆ: ಬಿ-ಆರ್ಕ್ ಅರ್ಹತಾ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಒಟ್ಟು 41 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲ ವಿದ್ಯಾರ್ಥಿಗಳು ಉನ್ನತ ಶ್ರೇಣಿಯೊಂದಿಗೆ ಅರ್ಹತೆಯನ್ನು ಪಡೆದಿದ್ದಾರೆ.WhatsApp Image 2021-10-09 at 11.23.21 AMರಾಷ್ಟ್ರಮಟ್ಟದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು: ಶ್ರೇಯಸ್ ಸಿ ಎನ್ 188ನೇ ರ‍್ಯಾಂಕ್ (ಎಸ್ ಸಿ ವಿಭಾಗ), ಶಿಲ್ಪಾ 353ನೇ ರ‍್ಯಾಂಕ್ (ಓಬಿಸಿ) ಮತ್ತು ಲಿಖಿತ್ ಎಮ್ ಡಿ 444ನೇ ರ‍್ಯಾಂಕ್ (ಎಸ್ ಟಿ) ಪಡೆದಿದ್ದಾರೆ. ಉಳಿದಂತೆ 23 ವಿದ್ಯಾರ್ಥಿಗಳು ಶೇ.85 ಅಧಿಕ ಅಂಕ ಗಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸಂಯೋಜಕರಾದ ರಾಮಮೂರ್ತಿ, ಡಾ.ದಯಾನಂದ ಪಿ.ಶುಭ ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *