ಬಂಟ್ವಾಳ: ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್, ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಕ್ಷೇತ್ರ ಸಮಿತಿ ಬಂಟ್ವಾಳ, ಜೇಸಿ ಬಂಟ್ವಾಳದಿಂದ ಸ್ವಚ್ಛತಾ ಕಾರ್ಯಕ್ರಮ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ನಡೆಯಿತು. ಈ ಸಂದರ್ಭ ಬಿ.ಸಿ.ರೋಡ್ ಬಸ್ ನಿಲ್ದಾಣ, ಡಿಸಿಸಿ ಬ್ಯಾಂಕ್ ಮುಂಭಾಗ ಸಹಿತ ಪೇಟೆಯ ಹಲವೆಡೆಗಳಲ್ಲಿ ಜೊತೆಗೆ ಮಿನಿ ವಿಧಾನಸೌಧದ ಆವರಣದವರೆಗಿನ ಜಾಗವನ್ನು ಸ್ವಚ್ಛಗೊಳಿಸಲಾಯಿತು.WhatsApp Image 2021-10-02 at 10.58.49 AMಪುರಸಭೆ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಶನ್ಫತ್ ಶರೀಫ್, ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಎಕ್ಸಿಕ್ಯುಟಿವ್ ಸೆಕ್ರೆಟರಿ ಕಿಶೋರ್ ಕುಮಾರ್, ಖಜಾಂಚಿ ಸುರೇಶ್ ಸಾಲಿಯಾನ್, ಜಯರಾಜ್ ಎಸ್.ಬಂಗೇರ, ಸುಕುಮಾರ್ ಬಂಟ್ವಾಳ, ಗಾಯತ್ರಿ ಲೋಕೇಶ್, ನಾರಾಯಣ ಸಿ.ಪೆರ್ನೆ, ಕೋಸ್ಟಲ್ ಹನೀಫ್, ಟೈಲರ್ಸ್ ಅಸೋಶಿಯೇಶನ್ ಅಧ್ಯಕ್ಷ ಎಂ. ನಾಗೇಶ್,  ಜೇಸಿ ಅಧ್ಯಕ್ಷ ಉಮೇಶ್ ಮೂಲ್ಯ, ಕಾರ್ಯದರ್ಶಿ ರೋಷನ್ ರೈ, ರೋಟರಿ ಟೌನ್, ಜೇಸಿ ಮತ್ತು ಟೈಲರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *