ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಕ್ಷೇತ್ರ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ೭೧ನೇ ಹುಟ್ಟುಹಬ್ಬ ಪ್ರಯುಕ್ತ ಶುಕ್ರವಾರ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.
ಆಡಳಿತ ಸಮಿತಿ ಅಧ್ಯಕ್ಷ ರಾಜೇಶ್.ಎಲ್ ನಾಯಕ್, ಸದಸ್ಯರಾದ ಗೋಪಾಲ ಸುವರ್ಣ, ಶಿವಶಂಕರ್, ಬೂಡ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪ್ರಮುಖರಾದ ಡೊಂಬಯ ಅರಳ, ರವೀಶ್ ಶೆಟ್ಟಿ, ಉಚಿದಾನಂದ ರೈ, ರೋನಾಲ್ಡ್ ಡಿ’ಸೋಜ, ಜಯರಾಮ ನಾಯ್ಕ್ , ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಪುರುಷೋತ್ತಮ ಶೆಟ್ಟಿ ,ಆನಂದ ಶಂಭೂರು, ಕೇಶವ ದೈಪಲ, ಸುರೇಶ್ ಕೋಟ್ಯಾನ್, ಕಿಶೋರ್ ಶೆಟ್ಟಿ ಅಂತರ, ಮೋಹನ್ ಪಿ.ಎಸ್, ರವಿ ಅಂಚನ್, ಪ್ರಶಾಂತ್ ನಾಟಿ, ರಾಜೇಶ್ ನಾಯಿಲ, ಬಾಲಕೃಷ್ಣ ಕಲಾಯಿ, ಚಿತ್ರಾವತಿ ಸುರೇಶ್ ಇದ್ದರು.
