ಶ್ರೀರಾಮ ಮಂದಿರ ಕಲ್ಲಡ್ಕದಲ್ಲಿ ೪೬ನೇ ವರ್ಷದ ಗಣೇಶೋತ್ಸವ
ಕಲ್ಲಡ್ಕ : ೪೬ನೇ ವರ್ಷದ ಗಣೇಶೋತ್ಸವ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಭವನದಲ್ಲಿ ಹಿರಿಯರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಇವರ ನೇತೃತ್ವದಲ್ಲಿ ನಡೆಯಿತು. With the introduction of progressive jackThanks for casinodulacleamy.com choosing Playtech. ಬೆಳಗ್ಗೆ ವಿಗ್ರಹ ಪ್ರತಿಷ್ಠೆಯೊಂದಿಗೆ ಪ್ರಾರಂಭಗೊಂಡು ಗಣಹೋಮ, ಮಧ್ಯಾಹ್ನದ ವಿಶೇಷ ಪೂಜೆ ಹಾಗೂ ಸಂಜೆ ರಂಗಪೂಜೆಗಳೊಂದಿಗೆ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು.ಅಲ್ಲದೇ ಕಲ್ಲಡ್ಕ ಸುತ್ತಮುತ್ತಲಿನ ೧೦೦ಕ್ಕಿಂತ ಹೆಚ್ಚು ಮನೆಗಳಿಂದ ತಯಾರಿಸಿ ತಂದಿರುವ ಅಪ್ಪವನ್ನು ದೇವರಿಗೆ ಸಮರ್ಪಿಸಿ ಅಪ್ಪದ ಪೂಜೆ ಮಾಡಲಾಯಿತು. ನಂತರ ರಾತ್ರಿ ಗಣೇಶನ ವಿಗ್ರಹವನ್ನು ಶ್ರೀರಾಮ ವಿದ್ಯಾಕೇಂದ್ರದ ಗಣೇಶ ಕೆರೆಯಲ್ಲಿ ವಿಸರ್ಜಿಸುವ ಮೂಲಕ ಕರ‍್ಯಕ್ರಮವು ಮುಕ್ತಾಯಗೊಂಡಿತು. ಈ ವಿಗ್ರಹವನ್ನು ಕಲ್ಲಡ್ಕ ರಮೇಶ್ ಶಿಲ್ಪಾ ಗೊಂಬೆ ಬಳಗ ಇವರು ರಚಿಸಿ ನೀಡಿರುತ್ತಾರೆ. ಕಾರ‍್ಯಕ್ರಮದಲ್ಲಿ ಊರಿನ ಹಿರಿಯರು, ಶ್ರೀರಾಮಾಂಜನೇಯ ಸೇವಾ ಟ್ರಸ್ಟ್(ರಿ), ಶ್ರೀರಾಮ ಮಂದಿರದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.