ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಬಂಟ್ವಾಳ ಇದರ ಶುಭಾರಂಭ ವು ನಂದಾವರ ಶ್ರೀಕ್ಷೇತ್ರ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಳದಲ್ಲಿ ಶ್ರೀ ಮಹಾಗಣಪತಿ ಹೋಮ ಮತ್ತು ಸಾಮೂಹಿಕ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡಿತು. ನಂತರ ದೇವಳದ ಹೊರಾಂಗಣದಲ್ಲಿ ಪ್ರತಿಷ್ಠಾನದ ಸದಸ್ಯರು ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪ್ರೊ. ಎ. ವಿ. ನಾರಾಯಣ ಮಾತನಾಡಿ ಸ್ವಚ್ಛತೆಯೂ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು. ಸದಸ್ಯರಾದ ಎಂ. ಆರ್. ವಾಸುದೇವ, ಭಾಸ್ಕರ ಬಾರ್ಯ, ದುಗ್ಗಪ್ಪ .ಯನ್, ಜಯರಾಮ ಭಂಡಾರಿ, ಜಯರಾಮ ಪೂಜಾರಿ, ಬಿ.ಎಂ ಮಹಾಲಿಂಗ ಭಟ್ ಮುರಳಿಧರ ರಾವ್, ದಿವಾಕರ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು.ಪ್ರತಿಷ್ಠಾನದ ಪ್ರಧಾನ ಸಂಚಾಲಕ ನಾರ್ಯ ಶ್ರೀನಿವಾಸಶೆಟ್ಟಿ ಸ್ವಾಗತಿಸಿದರು. ಲೋಕೇಶ್ ಹೆಗ್ದೆ ಪುತ್ತೂರು ವಂದಿಸಿದರು
