ವಿಟ್ಲ : ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317 ಇದರ ಜಿಲ್ಲಾ ಪ್ರಶಸ್ತಿ ಪುರಸ್ಕಾರ ಸಮಾರಂಭ “ಎಸ್ಟೀಮ್ 20-21″ನಲ್ಲಿ ವಿಟ್ಲ ಲಯನ್ಸ್ ಕ್ಲಬ್ ಸೇವಾ ಚಟುವಟಿಕೆಗಳಲ್ಲಿ, ಆಡಳಿತದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ ಹಾಗೂ ಜಿಲ್ಲೆ 317 D ಯ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಹಲವು ಪ್ರಶಸ್ತಿ ಪುರಸ್ಕಾರವನ್ನು ಪಡೆದಿದೆ.
ಈ ಪ್ರಶಸ್ತಿ ಪುರಸ್ಕಾರಕ್ಕೆ ಅಧ್ಯಕ್ಷರು ಜೆಸಿಂತಾ ಮಸ್ಕರೇನಸ್ ರವರ ಹತ್ತು ಹಲವು ಸೇವೆಗಳು ಅವರ ಕಠಿಣ ಪರಿಶ್ರಮ ಇದರೊಂದಿಗೆ ಸೆಕ್ರೆಟರಿ ಹರ್ಷಿತ್ ಕುಮಾರ್, ಖಜಾಂಚಿ ಭಾರತಿ ಪ್ರಕಾಶ್ ಅವರ ಸಹಕಾರ ಹಾಗೂ ವಿಟ್ಲ ಲಯನ್ಸ್ ಕ್ಲಬ್ಬಿನ ಸರ್ವಸದಸ್ಯರ ಸಹಕಾರದೊಂದಿಗೆ 2020 21 ನೇ ಸಾಲಿಗೆ ವಿಟ್ಲ ಲಯನ್ಸ್ ಕ್ಲಬ್ಬನ್ನು ಉತ್ತುಂಗದ ಎತ್ತರಕ್ಕೆ ಮುನ್ನಡೆಸಿರುತ್ತಾರೆ
