ಬಜಪೆ: ಮರವೂರು ಬಳಿ ಶನಿವಾರ ಬೆಳಗ್ಗೆ ರೈಲಿನಡಿಗೆ ಸಿಲುಕಿ ಜೀವನ್ಮರಣ ಹೋರಾಟ ಸ್ಥಿತಿಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ಮೃತ ಯುವಕನನ್ನು ಬಜಪೆ-ಕೊರಕಂಬ್ಳದ ನಿವಾಸಿ ನೋಣಯ್ಯ ಗೌಡ(23)ಎಂದು ಗುರುತಿಸಲಾಗಿದೆ.ಈತ ಮೇಸ್ತ್ರಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದರಲ್ಲದೆ, ಯಕ್ಷಗಾನದ ಹವ್ಯಾಸಿ ಕಲಾವಿದರಾಗಿದ್ದರು. ಈತ ಸ್ಥಳೀಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎನ್ನಲಾಗುತ್ತಿದ್ದು,ಇದು ಆತ್ಮಹತ್ಯೆಯೇ ಅಥವಾ ಆಕಸ್ಮಿಕ ಘಟನೆಯೇ ಎನ್ನುವು ತಿಳಿದುಬಂದಿಲ್ಲ.

By suddi9

Leave a Reply

Your email address will not be published. Required fields are marked *