ಬಂಟ್ವಾಳ:  ತಾಲ್ಲೂಕಿನ ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ವತಿಯಿಂದ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಮಾತನಾಡಿದರು.24btl-Krishiಬಂಟ್ವಾಳ ತಾಲ್ಲೂಕಿನಲ್ಲಿ ಮೂರು ಶಾಖೆ ಹೊಂದಿರುವ ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘವು ಕಳೆದ ಸಾಲಿನಲ್ಲಿ ಒಟ್ಟು ರೂ ೧೯.೨೮ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೧೦ರಷ್ಟು ಡಿವಿಡೆಂಟ್ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಹೇಳಿದ್ದಾರೆ.

ಇಲ್ಲಿನ ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ವತಿಯಿಂದ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣಾ ವ್ಯವಸ್ಥೆ ಸಂಘವು ನಡೆಸುತ್ತಿದ್ದು, ಕೃಷಿಕರಿಗೆ ಕ್ರಿಮಿನಾಶಕ, ಮತ್ತಿತರ ಸಾಮಾಗ್ರಿ ಪೂರೈಸುತ್ತಿದೆ. ಕೋವಿಡ್ ಸಂಕಷ್ಟದಲ್ಲಿಯೂ ಕಿಟ್ ವಿತರಣೆ, ಲಸಿಕೆ ಶಿಬಿರ ಆಯೋಜಿಸಿದೆ ಎಂದರು.

ಸಂಘದ ಉಪಾಧ್ಯಕ್ಷೆ ಶಶಿಕಲಾ ಉಡುಪ, ನಿರ್ದೇಶಕರಾದ ಉಮೇಶ್ ಪೂಜಾರಿ, ರಾಜೇಶ ಶೆಟ್ಟಿ, ಜ್ಞಾನೇಶ್ವರ ಪ್ರಭು, ವೆಂಕಟ್ರಾಯ ಪ್ರಭು, ಮನೋರಾಜ್ ಎ., ರೋಹಿನಾಥ್ ಕೆ., ಬಿ.ಟಿ.ನಾರಾಯಣ ಭಟ್, ಸುಂದರ ಭಂಡಾರಿ, ಪದ್ಮನಾಭ ಕಿದೆಬೆಟ್ಟು, ರತ್ನ, ಪೂವಪ್ಪ, ರಾಮನಾಯ್ಕ ಇದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಧರ್ಮಪಾಲ ಭಂಡಾರಿ ಸ್ವಾಗತಿಸಿ, ನಿರ್ದೇಶಕ ವೆಂಕಟೇಶ ನಾವಡ ಪೊಳಲಿ ವಂದಿಸಿದರು.

By Suddi9

Leave a Reply

Your email address will not be published. Required fields are marked *