ಕಾರ್ಕಳ: ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಹಾಗೂ ದೇವಳದ ಜಂಟಿ ಆಶ್ರಯದಲ್ಲಿ ಬಡ,ಅಶಕ್ತರಿಗೆ ಉಚಿತ ಔಷಧಿಯ ಕಾರ್ಡ್ ವಿತರಣಾ ಶಿಬಿರವು ಲಕ್ಷ್ಮೀಪುರ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಳದಲ್ಲಿ ನಡೆಯಿತು.

WhatsApp Image 2021-08-23 at 2.31.35 PM

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಶೋಕ ನಾಯಕ್ ಅವರು ಕಾರ್ಯಕ್ರಮಕ್ಕೆ ಶುಭ ಕೋರುವುದರೊಂದಿಗೆ ಬಡವರು,ಅಶಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಔಷಧಿ ಕಾರ್ಡಿನ ಉಪಯೋಗವನ್ನು ಪಡೆಯುವಂತೆ ಕರೆ ನೀಡಿದರು. ಇಂತಹ ಉಪಯುಕ್ತ ಕಾರ್ಯಕ್ರಮವನ್ನು ಆಯೋಜಿಸಿದ ಸಂಸ್ಥೆಗೆ ಧನ್ಯವಾದ ಸಮರ್ಪಿಸಿದರು.

ವೇದಿಕೆಯಲ್ಲಿ ದೇವಳದ 2ನೇ ಮೊಕ್ತೇಸರರಾದ ಪಾಂಡುರಂಗ ನಾಯಕ್, ಕಾರ್ಕಳ ತಾಲೂಕು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷರಾದ ಸದಾಶಿವ ಪ್ರಭು ಕಡ್ತಲ, ಕೆ ನಾರಾಯಣ ನಾಯಕ್, ಕುಂಡೇರಿ ಜಯಂತ ನಾಯಕ್, ಹಾಗೂ ರಾಜಾಪುರ ಸಾರಸ್ವತ ಮಹಿಳಾ ಮಂಡಳಿಯ ಅಧ್ಯಕ್ಷರಾದ ಉಷಾ ನಾಯಕ್, ಮಲಬಾರ್ ಗೋಲ್ಡ್ & ಡೈಮಂಡ್ ನ ಸ್ಟೋರ್ ಹೆಡ್ ಹಫೀಜ್ ರಹಮಾನ್,ಮ್ಯಾನೇಜರ್ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *