ಬಂಟ್ವಾಳ : ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಪ್ರದೇಶಾಭಿವೃದ್ಧಿ ನಿಧಿಯಿಂದ ಬಂಟ್ವಾಳದಲ್ಲಿ ಕಾರ್ಯಾಚರಿಸುತ್ತಿರುವ ಸಾರಿಗೆ ಸುರಕ್ಷಾ ಯೋಜನೆಯಡಿ K.S.R.T.C ICU ಬಸ್ಸ್ ಗೆ CAD ಫೌಂಡೇಶನ್ ನ ಡಾ.ಪದ್ಮನಾಭ ಕಾಮತ್ ರವರು ಹೃದಯ ಸಂಬಂಧಿಸಿದ ಕಾಯಿಲೆಯ ತಪಾಸಣೆ ನಡೆಸುವ ಇಸಿಜಿ ಯಂತ್ರ ಮತ್ತು ಹೈದ್ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ನೀಡಲಾಗುವ ರೂ 35,000 ಬೆಲೆಬಾಳುವ ರೆಟ್ಲೆಕ್ಸ್ ಕಿಟ್ ಇಂಜಕ್ಷನ್ ನನ್ನು CAD ಫೌಂಡೇಶನ್ ನ PRO ಆಗಿರುವ ಪ್ರದೀಪ್ ನಾಯಕ್ ರವರು ಶಾಸಕರಿಗೆ ಹಸ್ತಾಂತರಿಸಿದರು.
